ಬೇಕಾಗುವ ಸಾಮಗ್ರಿ : ಪನ್ನೀರ್ – 200 ಗ್ರಾಂ, ಪಾಲಾಕ್ ಸೊಪ್ಪು – 2 ಕಟ್ಟು, ಪಲಾವ್ ಎಲೆ – 3, ಜೀರಿಗೆ – 1/2 ಚಮಚ, ದಾಲ್ಚಿನ್ನಿ – 2, ಚಕ್ಕೆ – ಚಿಕ್ಕ ತುಂಡು, ಬೆಣ್ಣೆ – 2ಚಮಚ, ಕಸೂರಿ ಮೇತಿ – 3ಚಮಚ, ಶುಂಠಿ – 3/4 ಇಂಚು, ಹಸಿ ಮೆಣಸು – 5, ಗರಂ ಮಸಾಲಾ – 3/4 ಚಮಚ, ಬೆಳ್ಳುಳ್ಳಿ – 7 ಎಸಳು, ಫ್ರೆಶ್ ಕ್ರೀಂ – 1 ಚಮಚ, ಈರುಳ್ಳಿ 1, ಟೊಮೆಟೊ – 1, ಉಪ್ಪು, ಅಡುಗೆ ಎಣ್ಣೆ.
ಮಾಡುವ ವಿಧಾನ : ಪಾತ್ರೆಯಲ್ಲಿ ನೀರನ್ನ ಬಿಸಿ ಮಾಡಿ. ಇದಕ್ಕೆ ಪಾಲಕ್ ಎಲೆಯನ್ನ ಹಾಕಿ. ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಬೇಯಿಸಿ. ಈ ಪಾಲಕ್ ಸೊಪ್ಪನ್ನ ತಣ್ಣನೆಯ ನೀರಿರುವ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಬೇಯಿಸಿದ ಪಾಲಾಕ್ ಎಲೆಯನ್ನ ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆಯಲ್ಲಿ ಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿಯೂ ಸೇರಿಸಿ. ಅಗತ್ಯ ಪ್ರಮಾಣದಷ್ಟು ನೀರನ್ನ ಹಾಕಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ಬೆಣ್ಣೆಯನ್ನ ಹಾಕಿ. ಈ ಬೆಣ್ಣೆಯಲ್ಲಿ ಪನ್ನೀರ್ನ್ನು ಹುರಿದುಕೊಳ್ಳಿ. ಇದನ್ನ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಇದೆ ಬೆಣ್ಣೆ ಇರುವ ಪಾತ್ರೆಗೆ ಚಕ್ಕೆ, ಜೀರಿಗೆ, ಪಲಾವ್ ಎಲೆ, ದಾಲ್ಚಿನ್ನಿಯನ್ನ ಹಾಕಿ. ಈಗ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಟೊಮ್ಯಾಟೋವನ್ನ ಹಾಕಿ ಚೆನ್ನಾಗಿ ಫ್ರೈ ಮಾಡಿದ ಬಳಿಕ ಗರಂ ಮಸಾಲಾ ಹಾಗೂ ಉಪ್ಪನ್ನ ಹಾಕಿ ಸರಿಯಾಗಿ ಹುರಿದುಕೊಳ್ಳಿ. ಇದೀಗ ಪಾಲಕ್ ಮಿಶ್ರಣವನ್ನ ಈ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಬೇಯುತ್ತಿದ್ದಂತೆಯೇ ಪನ್ನೀರ್ನ್ನು ಹಾಕಿ ಬಳಿಕ ಫ್ರೆಶ್ ಕ್ರೀಂ ಹಾಕಿ. ಇದಕ್ಕೆ ಗರಂ ಮಸಾಲಾ ಹಾಗೂ ಕಸೂರಿ ಮೇತಿಯನ್ನ ಹಾಕಿ. ಒಂದೆರಡು ನಿಮಿಷ ಬಿಟ್ಟು ಸ್ಟೌ ಆಫ್ ಮಾಡಿ. ಪರಾಟಾ, ರೋಟಿಯ ಜೊತೆ ಸವಿಯಲು ನೀಡಿ .