ಗುರು ಬ್ರಹ್ಮ ಎಂಬುದು ಜಗಜ್ಜಾಹೀರ. ಆದರೆ, ಈಚೆಗೆ ವಿವಿಧ ಕಾರಣಕ್ಕೆ ಶಿಕ್ಷಕರೇ ಹಾದಿ ತಪ್ಪುತ್ತಿದ್ದು, ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಬೋಧನೆ ಮಾಡುವ ಶಿಕ್ಷಕ ವರ್ಗವೇ ತಮ್ಮ ಹಿತಾಸಕ್ತಿ ಕಾಯುವ ಪ್ರತಿನಿಧಿ ಆಯ್ಕೆ ವೇಳೆ ಆಮಿಷಕ್ಕೆ ಒಳಗಾಗುತ್ತಿರುವುದು ಆತಂಕ ತಂದೊಡ್ಡಿದೆ.
ಆಗ್ನೇಯ ಪದವೀಧರ ಶಿಕ್ಷಕರ ಚುನಾವಣೆ ಎಂ.ಎಲ್.ಎ ಚುನಾವಣೆಯನ್ನೆ ಅಣುಕಿಸುವಂತಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ವಿಧಾನಪರಿಷತ್ ಪ್ರವೇಶಿಸುವ ಪ್ರತಿನಿಧಿ ಶಿಕ್ಷಕರ ಹಿತ ಕಾಯಲು ಸಾಧ್ಯವೇ.
ಈ ವಾಸ್ತವ ಸತ್ಯ ಅರಿತು ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರು ಹೆಜ್ಜೆ ಹಾಕಿದರೆ ಸಮಾಜ ಸರಿ ದಾರಿಗೆ ಬರಬೇಕೆಂದು ಅಪೇಕ್ಷೆ ಪಡುವ ಶಿಕ್ಷಕರು ನೈತಿಕತೆ ಉಳಿಸಿಕೊಳ್ಳಲು ಸಾಧ್ಯ.
ಈ ಕುರಿತು ಬಿಸಿ ಸುದ್ದಿ ಜೊತೆ ಶಿಕ್ಷಕ ಎಸ್.ಜಯಣ್ಣ ತಮ್ಮ ಮನದಾಳದ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ವರ್ಗದ ಹಿತ ಕಾಯುವ ಈ ಮಾತು ಅನುಷ್ಠಾನಗೊಂಡರೇ ಕಾಳಜಿ ಸಾರ್ಥಕವಾಗಲಿ ಹೆಚ್ಚಿನ ಮಾಹಿತಿಗಾಗಿ bcsuddi.com ಯೂಟ್ಯೂಬ್ ಚಾನಲ್
ಚಳ್ಳಕೆರೆ ಬಸವರಾಜ್
ಸಂಪಾದಕರು
ಬಿಸಿ ಸುದ್ದಿ, ಚಿತ್ರದುರ್ಗ
ಮೊ:9916881352