ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್ ಇದು ನಿಮ್ಮ ಮಕ್ಕಳಿಗೆ ಇಷ್ಟವಾಗುವುದರ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಈ ಶೇಕನ್ನು ಡ್ರೈ ಪ್ರೂಟ್ಸ್, ಹಾಲು ಮತ್ತು ಬಾಳೆಹಣ್ಣನ್ನು ಬಳಸಿ ಮಾಡಲಾಗುತ್ತೆ. ಎಲ್ಲರ ಮನೆಯಲ್ಲೂ ದೊರೆಯುವ ಪದಾರ್ಥಗಳಾಗಿರುವುದರಿಂದ ಸುಲಭವಾಗಿ ಮಾಡಿಕೊಳ್ಳಬಹುದು.
ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್ ಗೆ ಬೇಕಾಗಿರುವ ಪದಾರ್ಥಗಳು :
ಬೋರ್ನ್ವೀಟಾ : 3 ಟೇಬಲ್ ಸ್ಪೂನ್ ಬಾಳೆಹಣ್ಣು : 1 ಸಕ್ಕರೆ : 2 ಟೇಬಲ್ ಸ್ಪೂನ್ ಕೋಲ್ಡ್ ಮಿಲ್ಕ್ : 1 ಕಪ್ ಬಾದಾಮಿ : 5 ಗೋಡಂಬಿ : 4 ಐಸ್ ಕ್ಯೂಬ್ಸ್ : 4 ಪೀಸ್ ಏಲಕ್ಕಿ : ಚಿಟಿಕೆ
ಮಾಡುವ ವಿಧಾನ : ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದು ಸಣ್ಣ ತುಂಡುಗಳಾಗಿ ಮಾಡಿ, ಬ್ಲೆಂಡರ್ ಜಾರ್ ಗೆ ಹಾಕಿ. ಇದಕ್ಕೆ ಮೇಲೆ ತಿಳಿಸಿರುವ ಪದಾರ್ಥಗಳಾದ ಹಾಲು, ಬೋರ್ನ್ವೀಟಾ, ಬಾದಾಮಿ, ಸಕ್ಕರೆ, ಗೋಡಂಬಿ ಮತ್ತು ಏಲಕ್ಕಿ ಜೊತೆಗೆ ಐಸ್ ಕ್ಯೂಬ್ಸ್ ಎಲ್ಲವನ್ನು ಹಾಕಿ ಗ್ರೈಂಡ್ ಮಾಡಿ. ನಂತರ ಈ ಶೇಕನ್ನು ಒಂದು ಗ್ಲಾಸ್ ಗೆ ಹಾಕಿದರೆ ರುಚಿಕರ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ರೆಡಿ.