ಮುಂಬೈ : ಭಾರತ ಸರ್ಕಾರವು ಬ್ರಿಟನ್‌ನ ವಿವಿಧ ಬ್ಯಾಂಕ್‌ಗಳ ತಿಜೋರಿಗಳಲ್ಲಿ ಇರಿಸಿದ್ದ 100 ಟನ್‌ಗಳಷ್ಟು ಚಿನ್ನವನ್ನು 2023–24ನೇ ಸಾಲಿನಲ್ಲಿ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಮುಂಬೈ ಮತ್ತು ನಾಗ್ಪುರದಲ್ಲಿ ಇರುವ ಆರ್‌ಬಿಐನ ಅತಿಭದ್ರತೆಯ ತಿಜೋರಿಗಳಲ್ಲಿ ಈ ಚಿನ್ನವನ್ನು ಇರಿಸಲಾಗಿದೆ. 1991ರಲ್ಲಿ ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ವಿದೇಶಿ ಮೀಸಲು ಬಿಕ್ಕಟ್ಟು ಪರಿಹರಿಸಲು ವಿದೇಶಿ ತಿಜೋರಿಗಳಲ್ಲಿ ಇದ್ದ ಭಾರತದ ಚಿನ್ನದ ಮೀಸಲಿನಲ್ಲಿ ಸ್ವಲ್ಪ ಪ್ರಮಾಣವನ್ನು ಅಡವಿಡಲಾಗಿತ್ತು. 1991ರ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನದ ಸಾಗಣೆ ನಡೆದಿರಲಿಲ್ಲ.
ಹಿಂದಿನ ಆರ್ಥಿಕ ವರ್ಷದಲ್ಲಿ ಭಾರಿ ಎಚ್ಚರಿಕೆ ವಹಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಂದ ಭಾರತಕ್ಕೆ ಚಿನ್ನವನ್ನು ಸಾಗಣೆ ಮಾಡಲಾಗಿದೆ. ಹಣಕಾಸು ಸಚಿವಾಲಯ, ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಇತರ ಕೆಲವು ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅತಿ ಹೆಚ್ಚಿನ ಮೌಲ್ಯದ ಸರಕಿನ ಸಾಗಣೆ ಇದಾಗಿದ್ದರಿಂದ, ರಹಸ್ಯವಾಗಿ ಕಾರ್ಯಾಚರಣೆ ನಡೆಸಲಾಗಿದೆ. 2009ರಲ್ಲಿ ಯುಪಿಎ ಸರ್ಕಾರವು 200 ಟನ್‌ಗಳಷ್ಟು ಚಿನ್ನವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಖರೀದಿಸಿತ್ತು. ಈಚಿನ ದಶಕಗಳಲ್ಲಿ ಅದೇ ಅತ್ಯಂತ ದೊಡ್ಡ ಖರೀದಿ. ಈಚಿನ ಕೆಲವು ವರ್ಷಗಳಲ್ಲಿ ಸರ್ಕಾರವು ತನ್ನ ಚಿನ್ನದ ಮೀಸಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೇ ವೇಳೆ ವಿದೇಶಗಳಲ್ಲಿ ಇರುವ ದೇಶದ ಚಿನ್ನದ ಮೀಸಲನ್ನೂ ಕಡಿಮೆ ಮಾಡಿಕೊಳ್ಳುವುದು ಮತ್ತು ಆ ಚಿನ್ನವನ್ನು ದೇಶದೊಳಗೇ ಸಂಗ್ರಹಿಸಿ ಇಡುವುದಕ್ಕೆ ಒತ್ತು ನೀಡುತ್ತಿದೆ. ಅದರ ಪರಿಣಾಮವಾಗಿಯೇ ಹಿಂದಿನ ಆರ್ಥಿಕ ವರ್ಷದಲ್ಲಿ 100 ಟನ್‌ಗಳಷ್ಟು ಚಿನ್ನವನ್ನು ವಿದೇಶಿ ತಿಜೋರಿಗಳಿಂದ ದೇಶದಲ್ಲಿನ ತಿಜೋರಿಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.
ಭಾರತವು ಒಟ್ಟು 822 ಟನ್‌ಗಳಷ್ಟು ಚಿನ್ನದ ಮೀಸಲನ್ನು ಹೊಂದಿದೆ. ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಚಿನ್ನವನ್ನು ವಿದೇಶಗಳ ತಿಜೋರಿಗಳಲ್ಲಿ ವಿದೇಶಿ ಬ್ಯಾಂಕ್‌ಗಳ ‘ಸೇಫ್’ಗಳಲ್ಲಿ ಇರಿಸಿದೆ. 2022–23ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಹೀಗೆ ವಿದೇಶಗಳಲ್ಲಿ ಇರಿಸಲಾಗಿದ್ದ ಚಿನ್ನದ ಪ್ರಮಾಣ 500 ಟನ್‌ಗಳಿಗಿಂತಲೂ ಹೆಚ್ಚು ಇತ್ತು. 2023–24ರಲ್ಲಿ 100 ಟನ್‌ಗಳಷ್ಟು ಚಿನ್ನವನ್ನು ಭಾರತಕ್ಕೆ ತಂದಿರುವ ಕಾರಣ, ವಿದೇಶಗಳಲ್ಲಿ ಇದ್ದ ಭಾರತದ ಚಿನ್ನದ ಮೀಸಲು ಸ್ವಲ್ಪ ಕಡಿಮೆಯಾಗಿದೆ. ದೇಶದಲ್ಲಿ ಈಗ ಚಲಾವಣೆಯಲ್ಲಿರುವ ನೋಟು ಮತ್ತು ನಾಣ್ಯಗಳ ಭದ್ರತೆ ರೂಪದಲ್ಲಿ 308 ಟನ್‌ಗಳಷ್ಟು ಚಿನ್ನವನ್ನು ಇರಿಸಲಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಸ್ವತ್ತಿನ ರೂಪದಲ್ಲಿ 100.21 ಟನ್‌ಗಳಷ್ಟು ಚಿನ್ನವನ್ನು ಇರಿಸಲಾಗಿದೆ. 822 ಟನ್ : ಭಾರತ ಸರ್ಕಾರದ ಚಿನ್ನದ ಒಟ್ಟು ಮೀಸಲು 413.79 ಟನ್ : ಭಾರತವು ವಿದೇಶಿ ಬ್ಯಾಂಕ್‌ಗಳಲ್ಲಿ, ವಿದೇಶಿ ತಿಜೋರಿಗಳಲ್ಲಿ ಇರಿಸಿರುವ ಚಿನ್ನದ ಮೀಸಲು 408.21 ಟನ್ : ದೇಶದೊಳಗಿನ ಅತಿಭದ್ರತೆಯ ತಿಜೋರಿಗಳಲ್ಲಿಇರುವ ಚಿನ್ನದ ಮೀಸಲು