ತಿರುವನಂತಪುರಂ:ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶಶಿ ತರೂರ್ ಹಾಗೂ ಬಿಜೆಪಿ ರಾಜೀವ್ ಚಂದ್ರಶೇಖರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
2009ರಿಂದ ನಿರಂತರ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತಾ ಬಂದಿದ್ದ ಕಾಂಗ್ರೆಸ್ನ ಶಶಿತರೂರ್ ಈ ಬಾರಿ ಹಿನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಸದ್ಯದ ಫಲಿತಾಂಶದ ಪ್ರಕಾರ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ 6,618
ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಎಣಿಕೆಯ ಪ್ರಾರಂಭದಲ್ಲಿ ಹಾಲಿ ಸಂಸದ ಶಶಿ ತರೂರ್, ತಮ್ಮ ಪ್ರತಿಸ್ಪರ್ಧಿ ರಾಜೀವ್ ಚಂದ್ರಶೇಖರ್ ಅವರಿಗಿಂತ ಕೇವಲ 1,920 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ನಂತರದ ಸುತ್ತಿನ ಮತ ಎಣಿಕೆಯಲ್ಲಿ ರಾಜೀವ್ ಚಂದ್ರಶೇಖರ್ 4,900 ಮತಗಳ ಮುನ್ನಡೆಯಲ್ಲಿದ್ದಾರೆ.