ಬೇರೆಯವರಿಗಿಂತ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಬೇಕು ಹಾಗೂ ಸಮಯಕ್ಕೆ ಸರಿಯಾಗಿ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳಬೇಕೆಂದರೆ, ಮೆದುಳಿನ ಕಾರ್ಯವೈಖರ್ಯ ಸರಿಯಾಗಿ ನಡೆಯಬೇಕು. ಹೀಗಾಗಿ ಮೆದುಳಿನ ಪ್ರಕ್ರಿಯೆ ಸರಿಯಾಗಿ ನಡೆಯಬೇಕೆಂದರೆ, ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಉದಾಹರಣೆಗೆ ಹಸಿರೆಲೆ ಸೊಪ್ಪು ತರಕಾರಿಗಳು, ದಿನಕ್ಕೊಂದು ಮೊಟ್ಟೆ, ನೆನೆಸಿಟ್ಟ ಬಾದಾಮಿ ಬೀಜಗಳು ಇತ್ಯಾದಿ… ದೇಹದ ಪ್ರಮುಖ ಅಂಗಗಳಲ್ಲಿ ಮೆದುಳು ಕೂಡ ಒಂದು. ಬಿಡುವಿಲ್ಲದೇ ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಮೆದುಳು ಮಾನವನ ದೇಹವನ್ನು ನಡೆಸುವ ಆಪರೇಟಿವ್ ಸಿಸ್ಟಮ್ ಇದ್ದ ಹಾಗೆ! ದೇಹದದಲ್ಲಿ ಪ್ರತಿಯೊಂದು ಹಾಗೂ ಹೋಗುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಸಾಧಿಸುವುದೇ ಇದಕ್ಕೆ ಕಾರಣ. ಮೆದುಳಿನ ಕಾರ್ಯವೈಖರ್ಯತೆ ಉತ್ತಮವಾಗಿರಬೇಕೆಂದರೆ, ಮೆದುಳಿನ ಭಾಗಕ್ಕೆ ಸರಿಯಾಗಿ ರಕ್ತ ಪೂರೈಕೆ ಸತತವಾಗಿ ಆಗುತ್ತಲೇ ಇರಬೇಕು. ಈ ವಿಧಾನ ಸರಿಯಾಗಿ ನಡೆಯಬೇಕೆಂದರೆ ನಾವು ಇದಕ್ಕೆ ಸೂಕ್ತವಾಗಿರುವ ಆಹಾರಪದಾರ್ಥಗಳನ್ನು ಸರಿಯಾಗಿ ಸೇವಿಸಬೇಕಾಗುತ್ತದೆ. ಉದಾಹರಣೆಗೆ ನೋಡುವುದಾದರೆ ಮೆದುಳಿನ ಆರೋಗ್ಯಕ್ಕೆ ಅನುಕೂಲಕರವಾಗಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಅಥವಾ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಹೆಚ್ಚಾಗಿರುವ ಆಹಾರಗಳನ್ನು ನಾವು ಹೆಚ್ಚು ಸೇವಿಸಬೇಕು ಯಾಕೆಂದರೆ, ಇಂತಹ ಆಹಾರಗಳನ್ನು ನಾವು ಸೇವನೆ ಮಾಡುವುದರಿಂದ, ಮೆದುಳಿನ ಕಾರ್ಯ ನಿರ್ವ ಹಣೆಗೆ ಬೇಕಾಗುವ ಹಾರ್ಮೋನು ಉತ್ಪತ್ತಿಯಾಗಿ, ಹಾಗೂ ರಕ್ತಪರಿಚಲನೆ ಕೂಡ ಸರಿಯಾಗಿ ನಡೆದು ಮೆದುಳು ಆರೋಗ್ಯಕರವಾಗಿ ಕೆಲಸ ಮಾಡಲು ಅನುಕೂಲವಾ ಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮೆದುಳಿನ ಆರೋಗ್ಯ ಕಾಪಾಡುವ ಕೆಲವೊಂದು ನೈಸರ್ಗಿಕ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಮೊಟ್ಟೆಯನ್ನು ಅತೀ ಪೋಷಕಾಂಶದಿಂದ ಕೂಡಿರುವ ಆಹಾರ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಯಥೇಚ್ಛವಾಗಿ ಕಂಡುಬರುವ ಪ್ರೋಟೀನ್, ಹಲವು ಬಗೆಯ ವಿಟಮಿನ್ಸ್‌ಗಳು, ಆರೋಗ್ಯಕ್ಕೆ ಬೇಕಾ ಗುವ ಕೊಬ್ಬಿನಾಂಶಗಳು, ಕಬ್ಬಿಣಾಂಶ, ಸತು, ಪೊಟ್ಯಾಶಿಯಂ, ಹಾಗೂ ಫೋಲೇಟ್ ಅಂಶ ಹೆಚ್ಚಾ ಗಿರುವುದರಿಂದ ದಿನಕ್ಕೊಂದು ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.ಹೀಗಾಗಿ ದಿನಕ್ಕೊಂದು ಮೊಟ್ಟೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬೇಕಾ ಗುವ ಪೌಷ್ಟಿಕ ಸತ್ವ ಗಳು ಸಿಗುವುದರ ಜೊತೆಗೆ ಮೆದುಳಿನ ಆರೋಗ್ಯವನ್ನು ಕೂಡ ವೃದ್ಧಿಸಲು ನೆರವಾಗುತ್ತದೆ. ಹೆಚ್ಚಿ ನವರು ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಇರುವುದರಿಂದ, ಇದರ ಬಿಳಿಭಾಗ ಒಳ್ಳೆ ಯದು, ಹಳದಿ ಹಳದಿ ಭಾಗ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ, ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟಾಲ್ ಹೆಚ್ಚಾಗಿ ಕಂಡು ಬರುತ್ತದೆ, ಇದೇ ಕಾರಣಕ್ಕೆ, ಇದನ್ನು ಅತಿಯಾಗಿ ತಿನ್ನಬಾರದು ವಿನಃ ಮೊಟ್ಟೆಯ ಹಳದಿ ಭಾಗವನ್ನೇ ತಿನ್ನಬಾರದು ಎಂದಲ್ಲ. ಹೀಗಾಗಿ ದಿನಕ್ಕೆ ಒಂದು ಅಥವಾ ಎರಡಕ್ಕೆ ಮೀರದಂತೆ ಸೇವಿಸುತ್ತಾ ಬಂದರೆ, ಮೆದುಳಿಗೆ ಅಗತ್ಯವಿರುವ ಆಹಾರ ಲಭಿಸುತ್ತದೆ. ಮೆದುಳು ಚುರುಕಾಗಲು, ದಿನಾ ಒಂದೆರಡು ಬಾದಾಮಿ ತಿನ್ನಿ ಎನ್ನುವ, ಮಾತನ್ನು ನಾವು ಎಷ್ಟೋ ಬಾರಿ ಕೇಳಿಯೇ ಇರುತ್ತೇವೆ. ಹೌದು, ಇದು ನಿಜ.. ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸ ಬೇಕೆಂದರೆ, ಪ್ರತಿದಿನ ಒಂದೆರಡು ನೆನೆಸಿಟ್ಟ ಬಾದಾಮಿ ಸೇವಿಸುತ್ತಾ ಬಂದರೆ ಒಳ್ಳೆಯದು. ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಬಾದಾಮಿ ಬೀಜದಲ್ಲಿ ಆರೋಗ್ಯಕ್ಕೆ ಬೇಕಾ ಗುವ ಉತ್ತಮ ಪ್ರಮಾಣದ ಕರಗುವ ನಾರು, ವಿಟಮಿನ್ ಇ, ಪ್ರೋಟೀನ್, ಮೆಗ್ನೀಶಿಯಂ ಹಾಗೂ ಇತರ ಪೌಷ್ಟಿಕ ಸತ್ವಗಳು ಹೇರಳವಾಗಿ ಸಿಗುವುದರಿಂದ, ಪ್ರತಿದಿನ ಈ ಒಣಫಲವನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ನೆರವಾಗುವುದು. ಆದರೆ ನಿಜ ಹೇಳಬೇಕೆಂದರೆ, ಹಸಿರು ತರಕಾರಿಗಳು ಮತ್ತು ಸೊಪ್ಪುಗಳು ಅತ್ಯಂತ ಪೌಷ್ಟಿಕಾಂಶ ಗಳಿಂದ ಕೂಡಿದ್ದ ಆಹಾರವಾಗಿದ್ದು, ಪ್ರತಿನಿತ್ಯ ನಮ್ಮ ಆಹಾರ ಪದಾರ್ಥಗಳಲ್ಲಿ ಮಿತವಾಗಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು. ಬೇಕೆಂದರೆ, ತಮ್ಮ ನಿತ್ಯದ ಸಲಾಡ್ ಮೂಲಕ, ಸ್ಮೂಥಿ, ಅಥವಾ ಜ್ಯೂಸ್ ಮೂಲಕ ಸೇವನೆ ಮಾಡಬಹುದು. ಇದರಿಂದ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳು ಸಿಗುವುದರ ಜೊತೆಗೆ, ಮೆದುಳಿನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಕರಾವಳಿಯ ಕಡೆಯ ಜನರಿಗೆ ಮೀನಿನ ಪದಾರ್ಥ ಇಲ್ಲದೇ ಇದ್ದರೆ ಊಟನೇ ಸೇರುವುದಿಲ್ಲ! ಇಲ್ಲಿನ ಜನ ಚಿಕನ್ ಕರಿಗಿಂತಲೂ ಮೀನಿನ ಕರಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ! ಅದು ಏನೇ ಇರಲಿ, ಅದರೆ ಮಿತ ವಾಗಿ ಮೀನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋನಗಳಿವೆ. ಮುಖ್ಯವಾಗಿ ಮೀನಿ ನಲ್ಲಿರುವ ಇರುವಂತಹ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಪ್ರೊಟೀನ್ ಅಂಶ ಗಳು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇಷ್ಟು ಮಾತ್ರವಲ್ಲದೆ, ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳು ಕೂಡ ಇದರಿಂದ ಸಿಗುತ್ತದೆ. ಇನ್ನು ವಿಶೇಷವಾಗಿ ಕೊಬ್ಬುಯುಕ್ತ ಅಥವಾ ಒಮೆಗಾ 3 ಕೊಬ್ಬಿನಾಮ್ಲ ಇರುವ ಮೀನುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ,ಮಕ್ಕಳಲ್ಲಿ ಸ್ಮರಣಶಕ್ತಿ ಹಾಗೂ ಬುದ್ಧಿವಂತಿಕೆ ಕೂಡ ಹೆಚ್ಚಾ ಗುತ್ತದೆ. ಇದರಿಂದ ಮೆದುಳಿನ ಕಾರ್ಯ ಚಟುವಟಿಕೆ ಕೂಡ ಹೆಚ್ಚಾಗುತ್ತದೆ.
