ಸಬ್ಜಾ ಬೀಜಗಳು ಎಂದೂ ಕರೆಯಲ್ಪಡುವ ತುಳಸಿ ಬೀಜಗಳು ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಿ ದೇಹದ ತೂಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾನೇ ಸಹಾಯಕ್ಕೆ ಬರುತ್ತದೆ.
ನಮಗೆಲ್ಲಾ ಗೊತ್ತೇ ಇರುವ ಹಾಗೆ ಆರೋಗ್ಯದ ವಿಚಾರದಲ್ಲಿ ಮನುಷ್ಯ ಎಷ್ಟು ಜಾಗೃತೆ ವಹಿಸಿ ಕೊಂಡರೂ ಸಾಲದು! ಯಾಕೆಂದರೆ ಯಾವ ಸಂದರ್ಭದಲ್ಲಿ ಆರೋಗ್ಯದ ಪರಿಸ್ಥಿತಿ ಯಾವ ರೀತಿ ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ.
ಇಂದಿನ ದಿನಗಳಲ್ಲಿ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳೇ, ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಪ್ರಮುಖವಾಗಿ ಇವು ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವುದು ಮಾತ್ರವ ಲ್ಲದೆ, ದಿನಕ್ಕೊಂದು ಆರೋಗ್ಯ ಸಮಸ್ಯೆಯನ್ನು ಎನ್ನುವಂತೆ ಒಂದಾದ ಮೇಲೆ ಇನ್ನೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿ ಬಿಡುತ್ತದೆ. ಅದರ ಲ್ಲೂ ಬಿಪಿ- ಶಗರ್‌ನಂತ ಕಾಯಿಲೆಗಳು ಕಾಣಿಸಿ ಕೊಂಡರೆ ಕಥೆ ಮುಗಿಯಿತು. ಬನ್ನಿ ಇಂದಿನ ಲೇಖನದಲ್ಲಿ, ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ತುಳಸಿ ಬೀಜಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ…
ಮಲಬದ್ಧತೆ ಸಮಸ್ಯೆಗೆ
ಪ್ರಮುಖವಾಗಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಈ ಬೀಜಗಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆ ಸರಿಯಾಗಿ ನಡೆಯಲು ಹಾಗೂ ಕರುಳಿನ ಚಲನೆಯನ್ನು ಉತ್ತಮ ಪಡಿಸಲು ಈ ಬೀಜಗಳು ಸಹಾಯ ಮಾಡುತ್ತವೆ.
ಒಂದು ವೇಳೆ ನಿಮಗೆ ಮಲಬದ್ಧತೆ ಸಮಸ್ಯೆ ತುಂಬಾ ದೀರ್ಘ ಕಾಲದಿಂದ ಕಾಡುತ್ತಿದ್ದರೆ, ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ಹಾಲಿಗೆ, ಒಂದು ಚಮಚದಷ್ಟು ತುಳಸಿ ಬೀಜಗಳನ್ನು ಮಿಕ್ಸ್ ಮಾಡಿ ಕುಡಿಯುತ್ತಾ ಬಂದರೆ, ಮಲಬದ್ಧತೆ ಅಜೀರ್ಣಹಾಗೂ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ದೂರ ವಾಗುತ್ತಾ ಹೋಗುತ್ತದೆ.
ದೇಹದ ತೂಕ ಕಡಿಮೆ ಆಗಲು ನೆರವಾಗುತ್ತದೆ
ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ ಎನ್ನುವುದು ಇತ್ತೀಚಿನ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಏನೇ ಕಸರತ್ತು ಮಾಡಿದರೂ ಕೂಡ, ಒಮ್ಮೆ ಆವರಿಸಿ ಕೊಂಡ, ದೇಹದ ತೂಕ ಹಾಗೂ ಇದರಿಂದಾಗಿ ಬರುವ ಬೊಜ್ಜಿನ ಸಮಸ್ಯೆಯನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ! ಆದರೆ ಮನಸ್ಸು ಮಾಡಿದರೆ, ಖಂಡಿತ ಸಾಧ್ಯವಿದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು, ಸರಿಯಾದ ಆಹಾರಪದ್ಧತಿ, ವ್ಯಾಯಾಮ ಹಾಗೂ ತುಳಸಿ ಬೀಜಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳ ಬೇಕು.
ಪ್ರಮುಖವಾಗಿ ಈ ಬೀಜಗಳಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಆಲ್ಫಾ ಲಿನೊಲಿಕ್ ಆಮ್ಲ ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಕೂಡ ಯಥೇಚ್ಛವಾಗಿ ಸಿಗುವುದರಿಂದ, ದೇಹದ ತೂಕ ಕರಗಿಸುವಲ್ಲಿ ಸಹಾಯಕ್ಕೆ ಬರುತ್ತದೆ.
ಮಧುಮೇಹ ನಿಯಂತ್ರಣ
ಮಧುಮೇಹ ಕಾಯಿಲೆಯ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಈ ಕಾಯಿಲೆ ವ್ಯಕ್ತಿಯಲ್ಲಿ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಆದರೆ ಕಟ್ಟು ನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿ ಸುವುದರ ಮೂಲಕ, ಈ ಕಾಯಿಲೆಯನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬಹುದು.
ಇನ್ನು ಈ ಕಾಯಿಲೆಯನ್ನು ನಿಯಂತ್ರಿಸುವ ವಿಷ್ಯದಲ್ಲಿ ಹೇಳು ವುದಾದರೆ, ತುಳಸಿ ಬೀಜಗಳು ನಮಗೆ ಸಹಾಯಕ್ಕೆ ಬರುತ್ತದೆ. ಪ್ರಮುಖವಾಗಿ ಈ ಬೀಜಗಳಲ್ಲಿ ಡಯೆಟರಿ ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ತಡೆ ಯುತ್ತದೆ.
ಇದಕ್ಕಾಗಿ ನೀವು ರಾತ್ರಿ ಮಲಗುವ ಮುನ್ನ ಒಂದು ಟೇಬಲ್ ಚಮಚ ಆಗುವಷ್ಟು ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ, ರಾತ್ರಿ ಪೂರ್ತಿ ನೆನೆಯಲ ಬಿಟ್ಟು, ಮರುದಿನ ಬೆಳಗ್ಗ ಒಂದು ಲೋಟ ಹಾಲಿಗೆ ಈ ನೆನೆಸಿಟ್ಟ ಬೀಜಗಳನ್ನು ಹಾಕಿ ಸೇವನೆ ಮಾಡುತ್ತಾ ಬಂದರೆ, ಮಧುಮೇಹವನ್ನು ನಿಯಂತ್ರಣ ದಲ್ಲಿಡಲು ಸಹಾಯವಾಗುವುದು.
ಮೈಕೈ ನೋವಿಗೆ ಬಹಳ ಒಳ್ಳೆಯದು
ಉರಿಯೂತ ವಿರೋಧಿ ಗುಣಲಕ್ಷಣಗಳು ಈ ಬೀಜಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಪದೇ ಪದೇ ಕಂಡು ಬರುವ ಮೈಕೈನೋವು, ಕಾಲಿನ ಗಂಟು ನೋವು, ಚರ್ಮದ ಮೇಲಿನ ಕೆರೆತ, ಊತ ಹಾಗೂ ಸಂಧಿವಾತದಂತಹ ಸಮಸ್ಯೆಯೂ ಕೂಡ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ.
ಮಾನಸಿಕ ಒತ್ತಡ ಕಡಿಮೆ ಆಗುತ್ತದೆ
ಮನುಷ್ಯನಿಗೆ ಮಾನಸಿಕ ಒತ್ತಡ ಎನ್ನುವುದು ಬದ್ಧ ವೈರಿ ಇದ್ದ ಹಾಗೆ. ಈ ಕಾಯಿಲೆಯ ಲಕ್ಷಣಗಳು ಮನುಷ್ಯನಲ್ಲಿ ಬೇರೂರಲು ಶುರು ಮಾಡಿದ್ರೆ, ಮುಂದಿನ ದಿನಗಳಲ್ಲಿ ಅನೇಕ ಆರೋಗ್ಯ ಸಮಸ್ಯೆ ಗಳು ಆತನನ್ನು ಕಾಡಲು ಶುರು ಮಾಡುತ್ತವೆ.
ಹಾಗಾಗಿ ಈ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿ ಕೊಳ್ಳಲು ಪ್ರತಿದಿನ ಒಂದು ಟೀ ಚಮಚ ಆಗುವಷ್ಟು ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ, ಬಳಿಕ ಇದನ್ನು ಕುಡಿಯುತ್ತಾ ಬಂದರೆ ಮಾನಸಿಕ ಒತ್ತಡ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ.