ಕಾರವಾರ ಜಿಲ್ಲಾಡಳಿತದಿಂದ ರೈತ ಯುವಕರು, ವಿಕಲಚೇತನರು ಹಾಗೂ ಎಚ್.ಐ.ವಿ ಪೀಡಿತರಿಗೆ ವಿವಾಹವಾಗಲು ಮೊದಲ ಬಾರಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್ ಸೈಟ್ https://uttarakannada.nic.in/ ನಲ್ಲಿ ಜೀವನ ಸಂಗಮ ಎಂಬ ಪೋರ್ಟಲ್ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿನ ಯುವ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆಯ್ಕೆಯನ್ನು ಪರಿಚಯಿಸಲು ಹಾಗೂ ಎಚ್.ಐ.ವಿ. ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ
ಸಂಬಂಧಗಳನ್ನು ಬೆಸೆಯಲು ಸೂಕ್ತ ವೇದಿಕೆಯಾಗಿದೆ.