ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು. ಟೊಮೆಟೊ ಸೂಪ್ ಗೆ ಬೇಕಾಗುವ ಪದಾರ್ಥ : ಟೊಮೆಟೊ : 4 ಕೆಂಪು ಮೆಣಸಿನ ಪುಡಿ : ½ ಚಮಚ ಸಕ್ಕರೆ :1/2 ಚಮಚ ಬ್ರೆಡ್ ತುಂಡು : 4-5 ಕಾಳು ಮೆಣಸು :1/2 ಚಮಚ ಉಪ್ಪು : ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು : ಸ್ವಲ್ಪ ತಾಜಾ ಕ್ರೀಂ : 1 ಚಮಚ
ಮಾಡುವ ವಿಧಾನ : ಟೊಮೆಟೊವನ್ನು ಚೆನ್ನಾಗಿ ತೊಳೆದು ಎರಡು ಕಪ್ ನೀರಿನಲ್ಲಿ ಟೊಮೆಟೊ ಹಾಕಿ ಕುದಿಸಲು ಇಡಿ. ಸಣ್ಣ ಉರಿಯಲ್ಲಿ ಟೊಮೆಟೊ ಚೆನ್ನಾಗಿ ಬೇಯಲಿ. ನಂತ್ರ ತಣ್ಣನೆ ನೀರಿಗೆ ಬೆಂದ ಟೊಮೆಟೊ ಹಾಕಿ ಅದ್ರ ಸಿಪ್ಪೆ ತೆಗೆಯಿರಿ. ನಂತ್ರ ಟೋಮೋಟೋವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ರುಬ್ಬಿದ ಟೊಮೆಟೊ ಹಾಕಿ ಬೇಯಿಸಲು ಇಡಿ. ಅದಕ್ಕೆ ಸಕ್ಕರೆ,ಮೆಣಸಿನ ಪುಡಿ ಸೇರಿಸಿದ ಮೇಲಿನ ಎಲ್ಲ ಪದಾರ್ಥವನ್ನು ಹಾಕಿ 8 ನಿಮಿಷ ಕುದಿಸಿ. ಮೇಲೆ ಹಸಿ ಕೊತ್ತಂಬರಿ ಸೊಪ್ಪು,ಕ್ರೀಂ ಹಾಕಿ ಸರ್ವ್ ಮಾಡಿ.