ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಖೇನ ನಾಡು – ನುಡಿಯ ಸೇವೆಗೆ ಸಂಬಂಧಿಸಿದಂತೆ ಕಲೆ, ಸಂಸ್ಕøತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಪ್ರತಿ ತಿಂಗಳು ರೂ.2000/ ಮಾಸಾಶನವನ್ನು ನೀಡುವ ಯೋಜನೆಯನ್ನು ಈ ಹಿಂದೆ ಜಾರಿಗೆ ತಂದಿದೆ. ಈ ಯೋಜನೆಗೆ ವರ್ಷ ಪೂರ್ತಿ ಅರ್ಜಿ ಸಲ್ಲಿಸಲು ಅವಕಾಶಗಳಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವವರು 58 ವರ್ಷ ಪೂರ್ಣಗೊಳಿಸಿರಬೇಕು. ಅರ್ಜಿದಾರರು 25 ವರ್ಷಗಳ ಕಾಲ ಕಲೆ, ಸಂಸ್ಕøತಿ, ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರಬೇಕು. ಅರ್ಜಿದಾರರು ಸರ್ಕಾರದ ಯಾವುದೇ ಇತರೇ ಇಲಾಖೆಯ ಯೋಜನೆಗಳ ಫಲಾನುಭವಿಯಾಗಿರಬಾರದು. ಅರ್ಜಿದಾರರ ವಾರ್ಷಿಕ ಆದಾಯ ರೂ.1 ಲಕ್ಷದ ಮಿತಿಯಲ್ಲಿರಬೇಕು.
ಆಸಕ್ತ ಅರ್ಹ ಕಲಾವಿದರು, ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ, ಮಾಹಿತಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-224496 ಗೆ ಸಂಪರ್ಕಿಸಬಹುದು ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.