ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ಇಷ್ಟು ದಿನ ದರ್ಶನ್ ಜೈಲಿನಲ್ಲಿ ಯಾರ ಬಳಿಯೂ ಮಾತನಾಡದೇ ಮೌನವಾಗಿದ್ದರು. ಅಲ್ಲದೆ, ಕೊನೆಗೆ ಪುಸ್ತಕಗಳನ್ನು ಓದುವುದರ ಕಡೆ ಗಮನಹರಿಸಿದ್ದರು. ಇದೀಗ ಅವರಿಗೆ ಜೈಲಿನಲ್ಲಿ ಹೊಸ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಸ್ನೇಹಿತ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್-ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಅಲ್ಲದೆ ಕೆಲವೊಬ್ಬರು ದರ್ಶನ್ ಈ ಸ್ಥಿತಿಗೆ ಬರಲು ಆತನ ಸುತ್ತಮುತ್ತ ಇರುವ ಪೋರ್ಕಿ ಗ್ಯಾಂಗೇ ಕಾರಣ. ಅವರ ಸಹವಾಸದೋಷದಿಂದ ದರ್ಶನ್ ಇಂತಹ ಸ್ಥಿತಿಯಲ್ಲಿರುವುದು ಎಂದು ಹೇಳಿದ್ದಾರೆ.
ಇನ್ನು ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟ ದರ್ಶನ್ ಅಲ್ಲಿನ ಯಾರೊಬ್ಬರ ಬಳಿಯೂ ಮಾತನಾಡದೇ ಸುಮ್ಮನೇ ಕುಳಿತುಕೊಳ್ಳುತ್ತಿದ್ದರಂತೆ. ಆದರೆ ಇದೀಗ ಆಶ್ಚವೆಂಬಂತೆ ಅವರಿಗೆ ಹೊಸ ಸ್ನೇಹಿತನ ಪರಿಚಯವಾಗುತ್ತಿದ್ದಂತೆ ಅವರು ಬದಲಾಗಿದ್ದಾರಂತೆ ಎಂಬ ಮಾಹಿತಿ ತಿಳಿದುಬಂದಿದೆ. ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳೇ ಆಗಿವೆಯಂತೆ.
ನಟ ದರ್ಶನ್ ಜೈಲಿನಲ್ಲಿ ಹೆಚ್ಚು ಸಮಯವನ್ನು ಬುಕ್‌ಗಳ ಜೊತೆ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರತಿ ದಿನ ದರ್ಶನ್ ಅವರು ಗ್ರಂಥಾಲಯದಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರಂತೆ. ಕನ್ನಡದ ಹಳೆ ಕಥೆ ಮತ್ತು ಕಾದಂಬರಿಗಳ ಕಡೆ ಕಣ್ಣಾಡಿಸುತ್ತಿದ್ದಾರಂತೆ. ಈ ಪುಸ್ತಕ ಸ್ನೇಹದಿಂದ ಜೈಲಿಗೆ ಬರುವ ವಾರ್ಡನ್‌ಗಳ ಜೊತೆ ನಗು ನಗುತ್ತಾ ದರ್ಶನ್ ಕಾಲ ಕಳೆಯುತ್ತಿದ್ದಾರೆ ಎನ್ನುವ ಸಂತಸದ ಮಾಹಿತಿಯೊಂದು ಲಭ್ಯವಾಗಿದೆ.
ಅತಿಸಾರದಿಂದ ಬಳಲುತ್ತಿರುವ ದರ್ಶನ್: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನು ಜೈಲಿನ ಊಟ ಸೇವಿಸಿ ದರ್ಶನ್ ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ಹೇಳಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಾಗಾದರೆ ಇದರ ಗುಣಲಕ್ಷಣಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅತಿಸಾರ ಹಿನ್ನೆಲೆ ನಟ ದರ್ಶನ್ ಮನೆಯ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ಕೇಳಿದ್ದಾರೆ ಎಂದು ದರ್ಶನ್ ಪರ ವಕೀಲರು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿ ಪರಿಶೀಲಿಸಿದ ನಂತರ, ನಿಯಮವು ಎಲ್ಲರಿಗೂ ಸಾಮಾನ್ಯವಾಗಿದೆ. ಮತ್ತು ಈ ಪ್ರಕರಣವನ್ನು ಸಹ ಅದೇ ರೀತಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಪೀಠವು ಜೈಲು ಅಧಿಕಾರಿಗಳು, ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಮತ್ತು ಅಪರಾಧಿಗಳಿಗೆ ವಿಭಿನ್ನ ಮಾರ್ಗಸೂಚಿಗಳಿವೆ ಮತ್ತು ಅದರಂತೆಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಜೈಲಿನಲ್ಲಿ ಮನೆ ಆಹಾರವನ್ನು ಅನುಮತಿಸಲಾಗಿದೆ ಎಂದು ಸಲ್ಲಿಸುವ ಅಗತ್ಯ ಇಲ್ಲ ಎಂದು ಪೀಠವು ಸೂಚಿಸಿತು. ಮತ್ತು ಈ ಬಗ್ಗೆ ಇತರ ನ್ಯಾಯಾಲಯಗಳಿಂದ ಆದೇಶಗಳನ್ನು ಪ್ರಸ್ತುತಪಡಿಸಲು ವಕೀಲರಿಗೆ ಸೂಚಿಸಿತು. ಕಾನೂನಿನಲ್ಲಿ ಅನುಮತಿ ಇದ್ದರೆ, ಮನೆಯ ಆಹಾರವನ್ನು ಅನುಮತಿಸಲಾಗುವುದು. ಇಲ್ಲದಿದ್ದರೆ ಅದನ್ನು ಅನುಮತಿಸಲಾಗುವುದಿಲ್ಲ. ಎಲ್ಲಾರಿಗೂ ಒಂದೇ ಕಾನೂನು ಆಗಿದ್ದು, ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುವುದು ಹೇಳಿದೆ.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ಜೈಲಿನಲ್ಲಿ ನೀಡಿದ ಆಹಾರ ಕಕ್ಷಿದಾರರಿಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಆದ್ದರಿಂದ ದರ್ಶನ್ ಅವರು ಅತಿಸಾರದಿಂದ ಬಳಲುತ್ತಿದ್ದಾರೆ. ಆತನನ್ನು ಪರೀಕ್ಷಿಸಿದ ಜೈಲು ಆರೋಗ್ಯಾಧಿಕಾರಿ ಆತನಿಗೆ ಸೋಂಕು ಅತಿಸಾರ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರ ತೂಕದಲ್ಲಿ ಇಳಿಕೆಯಾಗಿದೆ. ಜೈಲಿನಲ್ಲಿ ನೀಡಲಾದ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಮನೆ ಆಹಾರಕ್ಕಾಗಿ ಈಗಾಗಲೇ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅದನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.