ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಸಿಗುವ ಆರೋಗ್ಯ ಪ್ರಯೋಜನಗಳು

ಭಾರತದಲ್ಲಿನ ವೈವಿಧ್ಯತೆ, ಸಂಸ್ಕೃತಿ, ಸಂಪ್ರದಾಯ ಮತ್ತು ಅದೇ ರೀತಿಯಾಗಿ ಬಗೆಬಗೆಯ ಆಹಾರ ಕ್ರಮವನ್ನು ನೋಡಬೇಕಾದರೆ ಆಗ ಕರ್ನಾಟಕಕ್ಕೆ ಒಂದು ಸುತ್ತು ಹಾಕಿದರೆ ಸಾಕು. ಇಲ್ಲಿ ಆಡುವಂತಹ ಭಾಷೆಯಿಂದ ಹಿಡಿದು ತಿನ್ನುವಂತಹ ಆಹಾರದ ತನಕ ಪ್ರತಿಯೊಂದರಲ್ಲೂ ವಿಭಿನ್ನತೆಯಿದೆ. ಉತ್ತರ ಕರ್ನಾಟಕದ ಆಹಾರ ಕ್ರಮವೇ ಬೇರೆಯಾಗಿದ್ದರೆ, ದಕ್ಷಿಣ ಕರ್ನಾಟಕದವರದ್ದು ಒಂದು ರೀತಿಯಾಗಿದೆ. ರಾಗಿ ಮುದ್ದೆಯನ್ನು ತಿನ್ನುವುದರಿಂದ ಅನೇಕ ರೋಗಗಳಿಂದ ಪರಿಹಾರ ಪಡೆಯಬಹುದು. ವಿಶೇಷವಾಗಿ ಇದರಲ್ಲಿರುವ ಪೊಷಕಾಂಶಗಳು ಮೂಳೆ ಸಮಸ್ಯೆಯಿಂದ ರಕ್ತಹೀನತೆಯ ಸಮಸ್ಯೆಗಳವರೆಗೆ ಎಲ್ಲಾ ರೋಗಗಳಿಗೆ ಪರಿಹಾರ ನೀಡುತ್ತದೆ. ಹೆರಿಗೆ ಆಗಿರುವಂತಹ ತಾಯಂದಿರುವ ರಾಗಿ ಮುದ್ದೆ ತಿಂದರೆ ಆಗ ಮಗುವಿನ ಆರೋಗ್ಯವು ಚೆನ್ನಾಗಿ ಇರುವುದು. ಇದರಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇರುವುದು ಮಾತ್ರವಲ್ಲದೆ, ಹಾಲುಣಿಸುವ ತಾಯಂದಿರಲ್ಲಿ ಇದು ಎದೆ ಹಾಲು ಹೆಚ್ಚಿಸುವುದು. ಹಾಲಿನಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಅಮಿನೋ ಆಮ್ಲವಿದೆ. ಬೇಸಿಗೆಯಲ್ಲಿ ಪ್ರತಿದಿನ ರಾಗಿ ಮುದ್ದೆಯನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದರಲ್ಲಿರುವ ಕಬ್ಬಿಣ ಮತ್ತು ಫೈಬರ್ ನಂತಹ ಪೋಷಕಾಂಶಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಅಲ್ಲದೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ರಾಗಿ ಮುದ್ದೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯ ಗಟ್ಟಿಯಾಗಿರುತ್ತದೆ. ಅಲ್ಲದೆ, ಮೂಳೆಯ ಸಾಂದ್ರತೆಯೂ ಹೆಚ್ಚುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಹೃದಯ ಆರೋಗ್ಯ ಮತ್ತು ಸದೃಢವಾಗಿರುತ್ತದೆ. ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ. ನಿತ್ಯ ಸೇವಿಸುವುಸರಿಂದ ಚರ್ಮವು ಕೂಡ ತುಂಬಾ ಆರೋಗ್ಯಕರವಾಗಿರುತ್ತದೆ. ಮುದ್ದೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ, ಹೀಗಾಗಿ ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ರಕ್ತಹೀನತೆಯಿಂದ ಬಳಲುತ್ತಿರುವವರು ರಾಗಿ ಮುದ್ದೆಯನ್ನು ಪ್ರತಿದಿನ ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ರಾಗಿ ಮುದ್ದೆಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಉಪಹಾರದ ಭಾಗವಾಗಿ ಪ್ರತಿದಿನ ಇದನ್ನು ನೀವು ಸೇವಿಸಿದರೆ, ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ. ಅಲ್ಲದೆ, ಹೊಟ್ಟೆಯ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಇದನ್ನು ಪ್ರತಿದಿನ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement