ಬೆಂಗಳೂರು: ರೇಣುಕಾಸ್ವಾಮಿ ಪೋಸ್ಟ್ ಮಾರ್ಟಮ್ ವೇಳೆ ಹಾಜರಿದ್ರಾ ಪವಿತ್ರಾ ಗೌಡ ಆಪ್ತೆ ಸಮತಾ ಪತಿ.?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗ್ತಲೇ ಇದೆ. ಅದ್ರಲ್ಲೂ ಹೀಗ ನೀವು ಬೆಚ್ಚಿ ಬೀಳೋ ಸಂಗತಿಯೊಂದು ಪೊಲೀಸ್ರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.‌ ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ನಡೆದ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಎ1 ಆರೋಪಿಯಾದ ಪವಿತ್ರಗೌಡ ಪರಮ ಆಪ್ತೆ ಸಮತಾಳ ಪತಿ ಡಾ.‌ಸುರೇಶ್ ಇದ್ರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಅಂಶವನ್ನ ಪೊಲೀಸ್ರು ಬಯಲಿಗೆ ಎಳೆದಿದ್ದೇ ಒಂದು ರೋಚಕವಾಗಿದೆ. ಪವಿತ್ರಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರುತ್ತಿದ್ದಂತೆ ಆಕೆಯ ಭೇಟಿಗೆ ಈ ಸಮತಾ ತೆರಳಿದ್ರು. ಜೈಲಿಗೆ ತೆರಳಿದ್ದ ಸಮತಾ ಕೇವಲ ಪವಿತ್ರಗೌಡಳನ್ನ ಮಾತ್ರ ಮಾತನಾಡಿಸಿಕೊಂಡು ಬರದೇ ದರ್ಶನ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದಳು. ಅಲ್ಲಿ ನಡೆದ ಸುಧೀರ್ಘ ಮಾತುಕತೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ತನಿಖಾ ತಂಡ ಸಮತಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಸಮತ ಫೋನ್‌ನಲ್ಲಿ ಪತ್ತೆಯಾದ ಕೆಲ ಸಂದೇಶಗಳು ಹಾಗೂ ಆಕೆ ನೀಡಿದ ಹೇಳಿಕೆ ಕೇಳಿ ಒಂದು ಕ್ಷಣ ಪೊಲೀಸ್ರಿಗೆ ಶಾಕ್ ಆಗಿತ್ತು. ಅದೇನಪ್ಪ ಅಂದ್ರೆ ಜೂನ್ 11ರಂದು ನಡೆದ ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ವೇಳೆ ಹಲವು ತರಬೇತಿ ವೈದ್ಯರು, ಪಿಜಿ ವಿದ್ಯಾರ್ಥಿಗಳು ಭಾಗಿಯಾಗಿದ್ರು. ಆದ್ರೆ ರಜೆಯಲ್ಲಿದ್ದ ಡಾ.‌ಸುರೇಶ್ ಕೂಡ ಭಾಗಿಯಾಗಿದ್ರು. ಆ ವಿಚಾರ ತಿಳಯುತ್ತಿದ್ದಂತೆ ಅಲರ್ಟ್ ಆದ ಪೊಲೀಸ್ರು, ಫೋಸ್ಟ್ ಮಾರ್ಟಮ್ ರಿಪೋರ್ಟ್ ತಿದ್ದಿರೋ ಸಾಧ್ಯತೆ ಇರುತ್ತೆ ಅಂತ ಪರಿಶೀಲನೆ ಮಾಡಿದ್ರು. ಸಮತಾ ಹೇಳಿಕೆಯನ್ನ ದಾಖಲಿಸಿಕೊಂಡಿರೋ ಪೊಲೀಸ್ರು ಆಕೆಯ ಪತಿ ಡಾ. ಸುರೇಶ್ ಕಾಲ್ ಡಿಟೇಲ್ಸ್, ಚಾಟಿಂಗ್ಸ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ನಡೆದ ದಿನ ಡಾ. ಸುರೇಶ್ ಡ್ಯೂಟಿ ರಜೆ ಇದ್ರು ಕರ್ತವ್ಯಕ್ಕೆ ಹಾಜರಾಗಿದ್ರು ಅನ್ನೋ ಮಾತುಗಳು ಕೇಳಿ ಬರ್ತಿದ್ದು, ತಾನೇ ಖುದ್ದು ಮುಂದೆ ನಿಂತು ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ನಡೆಸಿದ್ರು. ಆ ಹಿನ್ನೆಲೆಯಲ್ಲಿ ಪವಿತ್ರಗೌಡ ಕ್ಲೋಸ್ ಫ್ರೆಂಡ್ ಪತಿಯಾಗಿರೋ ಕಾರಣಕ್ಕೆ ವರದಿಯನ್ನ ಮತ್ತೊಮ್ಮೆ ಪರಿಶೀಲನೆ ನಡೆಸಿ ಡಾ. ಪ್ರದೀಪ್ ಎಂಬ ವೈದ್ಯರಿಂದ ಪೊಲೀಸ್ರಿಗೆ ಮರಣೋತ್ತರ ಪರೀಕ್ಷಾ ವರದಿ ಪಡೆದು ತನಿಖೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement