ಪನ್ನೀರ್ ಬಳಸಿ ಸುಲಭವಾಗಿ ಒಂದು ಪುಲಾವ್ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಪನ್ನೀರ್-200 ಗ್ರಾಂ, ಬಾಸುಮತಿ ಅಕ್ಕಿ-1 ಕಪ್, ತುಪ್ಪ-3 ಟೇಬಲ್ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಎಣ್ಣೆ, 1 ಟೇಬಲ್ ಸ್ಪೂನ್, ಈರುಳ್ಳಿ-3 ಹದಗಾತ್ರದ್ದು ಉದ್ದಕ್ಕೆ ಸೀಳಿಕೊಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಟೇಬಲ್ ಸ್ಪೂನ್, ಚಕ್ಕೆ-1 ಸಣ್ಣ ತುಂಡು, ಏಲಕ್ಕಿ-2, ಲವಂಗ-2, ಪಲಾವ್ ಎಲೆ-1, ಹಸಿಮೆಣಸು 3 ಉದ್ದಕ್ಕೆ ಸೀಳಿಕೊಂಡಿದ್ದು, ಕ್ಯಾರೆಟ್-1 ಸಣ್ಣಗೆ ಕತ್ತರಿಸಿಕೊಂಡಿದ್ದು, ಸ್ವಲ್ಪ-ಕೊತ್ತಂಬರಿಸೊಪ್ಪು, ಸ್ವಲ್ಪ-ಪುದೀನಾ ಸೊಪ್ಪು, ನೀರು-2 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ತುಪ್ಪ, ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಇದಕ್ಕೆ ಪನ್ನೀರ್ ಅನ್ನು ಕತ್ತರಿಸಿಕೊಂಡು ಹಾಕಿ ಕೆಂಪಗಾಗುವವರಗೆ ಹುರಿದು ಎತ್ತಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ. ಈರುಳ್ಳಿ ಸೇರಿಸಿ ತುಸು ಕೆಂಪಗಾಗುವವರೆಗೆ ಹುರಿದುಕೊಂಡು ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ತುಸು ಫ್ರೈ ಮಾಡಿ. ಇದಕ್ಕೆ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿಕೊಳ್ಳಿ. ನಂತರ ಅಕ್ಕಿ ಸೇರಿಸಿ. ಅಕ್ಕಿ ನೀರನ್ನೆಲ್ಲಾ ಎಳೆದುಕೊಳ್ಳುವವರಗೆ ಚೆನ್ನಾಗಿ ಬೇಯಿಸಿ. ನಂತರ ಪನ್ನೀರ್, ಕೊತ್ತಂಬರಿಸೊಪ್ಪು, ಪುದೀನಾ ಸೊಪ್ಪು ಹಾಕಿ ಒಂದು ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.