ಶಿವಶರಣ ಹಡಪದ ಅಪ್ಪಣ್ಣ : ತನು ಮನ ಭಾವ ಶುದ್ಧಿಯಿಂದ ಸಮ ಸಮಾಜ ನಿರ್ಮಾಣ ಎಂ.ಕಾರ್ತಿಕ್

 

ಚಿತ್ರದುರ್ಗ : ಪ್ರತಿಯೊಬ್ಬರು ತನು, ಮನ, ಭಾವ ಶುದ್ಧಿಯಾಗಿಟ್ಟುಕೊಂಡು ತಮ್ಮ ಕೆಲಸ ಕಾರ್ಯಗಳಲ್ಲಿ ಸರಿಯಾದ ರೀತಿಯಲ್ಲಿ ತೊಡಗಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ  ಆಯೋಜಿಸಲಾದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

Advertisement

ಹಡಪದ ಅಪ್ಪಣ್ಣನವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋದರೆ ಸಮ ಸಮಾಜ ನಿರ್ಮಿಸಬಹುದು. ಅವರು ತಮ್ಮ ಸುತ್ತ ಮುತ್ತಲಿನ ವಾತಾವರಣ, ಸಮಾಜ, ಜೀವನವನ್ನು ಅರ್ಥೈಸಿಕೊಂಡು ಅತ್ಯಂತ ಸರಳವಾಗಿ, ಅರ್ಥಗರ್ಭಿತವಾಗಿ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ಬಸವಾದಿ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ಕಟ್ಟಬಹುದು. ಈ ನಿಟ್ಟಿನಲ್ಲಿ ಇಂತಹ ಹಲವು ಕಾರ್ಯಗಳಲ್ಲಿ ತೊಡಗಿಕೊಂಡು ನಾವೆಲ್ಲರೂ ಸೇರಿ ಸಮ ಸಮಾಜ ನಿರ್ಮಾಣ ಮಾಡೋಣ ಎಂದರು.

ಸಾಹಿತಿ ಎಂ.ಬಿ.ನಾಗರಾಜ್ ಕಾಕನೂರು ಅವರು ಶಿವಶರಣ ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ನೀಡಿ,  12ನೇ ಶತಮಾನದ ಶಿವಶರಣರು ಅಸಮಾನತೆಯ ಕಂದರ ಮುಚ್ಚಿ ಸರ್ವರಿಗೆ ಸಮಾನತೆಯ ಬೆಳಕನ್ನು ಕೊಟ್ಟರು. ಕೆಲವರು ಸ್ವತ್ತಾಗಿದ್ದ ಜ್ಞಾನವನ್ನು ಸರ್ವರ ಸ್ವತ್ತಾಗಿ ಮಾಡಿದರು. ಕಾಯಕ ಸಿದ್ದಾಂತದ ಮೂಲಕ ಹೊಸ ಆರ್ಥಿಕ ನೀತಿಯನ್ನು ತರಲಾಯಿತು. ಲಿಂಗ ಜಾತಿಯ ಸೂಚಕವಲ್ಲ. ಅದು ಜ್ಯೋತಿಯ ಸೂಚಕ ಎಂದು ಹೇಳಿದರು.

ಲೌಕಿಕವಾಗಿ ಹಾಗೂ ಪಾರಮಾರ್ಥಿಕವಾಗಿ ಈ ಎರಡರಲ್ಲೂ ವಿಶೇಷ ಸಾಧನೆ  ಮಾಡಿದ ಪ್ರತಿಫಲವಾಗಿ ಅಲ್ಲಮ್ಮ ಪ್ರಭು ಅವರು ಹಡಪದ ಅಪ್ಪಣ್ಣ ಅವರನ್ನು “ನಿಜಸುಖಿ ಹಡಪದ ಅಪ್ಪಣ್ಣ” ಎಂದು ಕರೆದಿದ್ದಾರೆ ಎಂದು ಹೇಳಿದರು.

ಹಡಪದ ಅಪ್ಪಣ್ಣ  ಬಹಳ ಸೇವಾನಿಷ್ಟ ಹಾಗೂ ಪ್ರಮಾಣಿಕರಾಗಿದ್ದರು. ಕಲ್ಲಿಗೆ ಸಂಸ್ಕಾರ ಕೊಟ್ಟರೆ ಶಿಲೆ, ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆ, ಬಿದಿರಿಗೆ ಸಂಸ್ಕಾರ ಕೊಟ್ಟರೆ ಕೊಳಲು,  ಸಗಣಿಗೆ ಸಂಸ್ಕಾರ ಕೊಟ್ಟರೆ ಭಸ್ಮ, ಆಹಾರಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದ, ನರನಿಗೆ ಸಂಸ್ಕಾರ ಕೊಟ್ಟರೆ ಹರ,  ನೀರಿಗೆ ಸಂಸ್ಕಾರ ಕೊಟ್ಟರೆ ತೀರ್ಥ, ಜೀವಕ್ಕೆ ಸಂಸ್ಕಾರ ಕೊಟ್ಟರೆ ಜಂಗಮ ಸ್ವರೂಪಿಯಾಗುತ್ತಾನೆಂದು ತೋರಿಸಿಕೊಟ್ಟವರು ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಎಂದು ಹೇಳಿದರು.

ಒಬ್ಬರ ಮನೆ, ಒಬ್ಬರ ಮನಸ್ಸು ಮುರಿಯದವನೇ ನಿಜವಾದ ಶರಣ. ಅಂತಹ ಶರಣರು ಹಡಪದ ಅಪ್ಪಣ್ಣ. ನೇರವಾದ ಮಾತುಗಳಿಂದ ಪ್ರೀತಿಯಿಂದ ಸರ್ವರನ್ನು ಅಪ್ಪಿಕೊಂಡರು. ದಿಕ್ಕೆಟ್ಟವರ ಬದುಕಿಗೆ ದಿಕ್ಸೂಚಿಯಾದವರು ಹಡಪದ ಅಪ್ಪಣನವರು ಎಂದರು.

ಪ್ರತಿಯೊಬ್ಬರೂ ಹಡಪದ ಅಪ್ಪಣ್ಣನವರ ಕೊಡುಗೆ, ಆಶಯಗಳನ್ನು ಮನಗಂಡು ಮುನ್ನಡೆಯಬೇಕಿದೆ. ತಮ್ಮ ಮಕ್ಕಳಿಗೆ ವೃತ್ತಿ ಬದುಕಿನ ಜತೆಗೆ ಉತ್ತಮ ಸಂಸ್ಕಾರ, ವಿದ್ಯಾಭ್ಯಾಸ ನೀಡಿ ಸಾತ್ವಿಕ ಸಮಾಜ ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕಿದೆ ಎಂದರು.

ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡದವರು ಗೀತ ಗಾಯನ ಪ್ರಸ್ತುತ ಪಡಿಸಿದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಜಯಪ್ಪ, ಕಾರ್ಯದರ್ಶಿ ಎಲ್.ಆರ್.ವೀರಭದ್ರಪ್ಪ ಲೋಕದೊಳಲು, ತಾಲ್ಲೂಕು ಅಧ್ಯಕ್ಷ ವೃಷಬೇಂದ್ರಪ್ಪ, ಜಿಲ್ಲಾ ಸಂಚಾಲಕ ಟಿ.ಸಿ.ಶಿವಪ್ರಕಾಶ್ ಸಾಹಿತಿಗಳಾದ ಜಗನ್ನಾಥ್, ವೇದಮೂರ್ತಿ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಹಡಪದ ಅಪ್ಪಣ್ಣ ಸೇವಾ ಸಂಘದ ಮುಖಂಡರು

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement