ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಹಲವಾರು ಸೆಲೆಬ್ರಿಟಿಗಳಿಂದ ದರ್ಶನ್ ಭೇಟಿಗೆ ಪ್ರಯತ್ನಿಸಿದ್ದಾರೆ. ಕೆಲವರು ಭೇಟಿ ಮಾಡಿ ದರ್ಶನ್ ಜೊತೆ ಮಾತು ಕತೆ ನಡೆಸಿ ಬಂದಿದ್ದಾರೆ.
ಇನ್ನು ಕೆಲವರಿಗೆ ದರ್ಶನ್ ದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಅಲ್ಲದೇ ದರ್ಶನ್ ಭೇಟಿ ಮಾಡಲು ಸ್ಯಾಂಡಲ್ವುಡ್ ಸ್ಟಾರ್ಸ್ ಜೊತೆಗೆ ಟಾಲಿವುಡ್ ಸ್ಟಾರ್ಸ್ ಇಂದಲೂ ಸಹ ಭೇಟಿಗೆ ಪ್ರಯತ್ನಿಸಿದ್ದಾರೆ. ಟಾಲಿವುಡ್ ನಟ ಸದ್ದಿಲ್ಲದೆ ದರ್ಶನ್ ಜೈಲಲ್ಲಿ ಭೇಟಿ ಮಾಡಿದ್ದಾರೆ.
ತೆಲುಗಿನ ಖ್ಯಾತ ನಟ ನಾಗಶೌರ್ಯ ಕಳೆದ ವಾರ ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದಾರೆ. ದರ್ಶನ್ ಕುಟುಂಬದ ಜೊತೆ ಹೋಗಿ ಜೈಲಲ್ಲಿ ದರ್ಶನ್ ಭೇಟಿಯಾಗಿದ್ದಾರೆ. ದರ್ಶನ್ ವಿಚಾರಿಸಲು ಬಂದ ನಾಗಶೌರ್ಯಗೆ ಕ್ಷೇಮ ವಿಚಾರಿಸಿದ ದರ್ಶನ್ ಹೇಗಿದ್ಯಾ ಹೀರೊ, ಹೇಗೆ ನಡೀತಿದೆ ಪ್ರಾಜೆಕ್ಟ್, ಯಾವ ಫಿಲಂ ಶೂಟಿಂಗ್ ನಡೀತಿದೆ ಅಂತ ಕೂಲ್ ಆಗೆ ಮಾತನಾಡಿಸಿದ್ರಂತೆ. ಸಿನಿಮಾ ರಿಲೀಸ್ ಯಾವಾಗ ಅಂತೆಲ್ಲಾ ದರ್ಶನ್ ಮಾತುಕತೆ ನಡೆಸಿದ್ದಾರೆ.