ಬೆಂಗಳೂರು : ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ದಂಡದ ಬಿಸಿ BMTC ಮುಟ್ಟಿಸಿದೆ. ದಂಡದಿಂದ BMTC ಖಜಾನೆಗೆ ಲಕ್ಷ ಲಕ್ಷ ದಂಡದ ಹಣ ಹರಿದು ಬಂದಿದೆ. ಜೂನ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 3750 ಪ್ರಯಾಣಿಕರಿಗೆ ದಂಡ ವಿಧಿಸಿದ್ದು ಒಟ್ಟು 18,378 ಟ್ರಿಪ್‌ಗಳನ್ನು ತನಿಖಾ ತಂಡ ತಪಾಸಣೆ ನಡೆಸಿದೆ.
ಈ ವೇಳೆ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 3708 ಪ್ರಯಾಣಿಕರು ಪತ್ತೆಯಾಗಿದ್ದಾರೆ. ಅವರಿಂದ ಒಟ್ಟು ₹76,89,10 ದಂಡ ವಸೂಲಿ ಮಾಡಿದ್ದು ಮಹಿಳೆಯರ ಸೀಟ್ ನಲ್ಲಿ ಸಂಚರಿಸಿದ್ದ ಪುರುಷರಿಂದ ₹42600 ದಂಡ ವಸೂಲಿ ಮಾಡಲಾಗಿದೆ. ಒಟ್ಟು ಬಿಎಂಟಿಸಿ ಖಜಾನೆಗೆ ಜೂನ್ ತಿಂಗಳಲ್ಲಿ ದಂಡದ ರೂಪದಲ್ಲಿ ₹8,11,510ರೂ ಜಮೆಯಾಗಿದೆ. ಬಿಎಂಟಿಸಿ ನಿಗಮದ ಖಜಾನೆಗೆ ದಂಡದಿಂದ ಲಕ್ಷಾಂತರ ರೂ ಸೇರ್ಪಡೆಯಾಗಿರುವುದು ಸತ್ಯ