ಶಿರೂರು: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ನೀರಿನಲ್ಲಿನಲ್ಲಿ ಮುಳುಗಿರುವ ಟ್ರಕ್ ಅನ್ನು ನೀರಿನಿಂದ ಹೊರತೆಗೆಯಲು ಮುಂದಾಗಿದೆ.
ಲಾರಿಯು ಭೂಕುಸಿತವಾದ ಸ್ಥಳದಿಂದ 60 ಮೀಟರ್ ಮತ್ತು ನದಿಯ ತಳದ ಕೆಳಗೆ 5 ಮೀಟರ್ ಆಳದಲ್ಲಿ ಹೂತು ಹೋಗಿದ್ದು ಜಿಲ್ಲಾಡಳಿತ ಇದೀಗ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದೆ.
ಇನ್ನೊಂದೆಡೆ ಮಲ್ಪೆ ಈಶ್ವರ್ ತಂಡ ಶಿರೂರಿಗೆ ಬಂದಿದ್ದು ನಾಪತ್ತೆಯಾದ ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಈಶ್ವರ್ ಮಲ್ಪೆ ಅವರಿಗೆ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆ ಕಾರ್ಯಾಚರಣೆಗೆ ಸಹಾಯ ಮಾಡುವಂತೆ ಉತ್ತರಕನ್ನಡ ಎಸ್ಪಿ, ಡಿಎಸ್ಪಿ ಅವರು ಕರೆ ಮಾಡಿದ್ದರು ಎನ್ನಲಾಗಿದೆ.
ಇಂದು ಮುಂಜಾನೆ ಈಶ್ವರ್ ಹಾಗೂ ೮ ಮಂದಿ ಶಿರೂರಿಗೆ ತಲುಪಿದ್ದು, ಸೇನಾ ಪಡೆ, ಎನ್.ಡಿ.ಆರ್.ಎಫ್. ತಂಡದ ಮಾರ್ಗದರ್ಶನ ಪಡೆದು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.