“ಸಖಿ”ಘಟಕ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ: ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ “ಸಖಿ” (ಒನ್ ಸ್ಟಾಪ್ ಸೆಂಟರ್) ಘಟಕ ಯೋಜನೆಯಡಿ 2024-25ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ, ವಿದ್ಯಾರ್ಹತೆ, ಗೌರವಧನದ ವಿವರ: ಸೆಂಟರ್ ಅಡ್ಮಿನಿಸ್ಟೆçÃಟರ್-1 ಹುದ್ದೆಗೆ ಎಂಎಸ್ ಡಬ್ಲ್ಯೂ/ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ, ಎಂಎಸ್ಸಿ ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (ಮಾನವ ಅಭಿವೃದ್ಧಿ ಮತ್ತು ಕುಟುಂಬ ಸಂಬAಧ), ಎಂಎಸ್ಸಿ ಸೈಕಾಲಜಿ, ಎಂಎಸ್ಸಿ ಮನೋವೈದ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕೌನ್ಸಿಲಿಂಗ್ ಕ್ಷೇತ್ರದಲ್ಲಿ ಕನಿಷ್ಟ ಐದು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ ರೂ.40,000/- ವೇತನ ನೀಡಲಾಗುವುದು.

Advertisement

ಕೌನ್ಸಲರ್-(ಸೈಕೋ ಸೋಶಿಯಲ್ ಕೌನ್ಸೆಲಿಂಗ್) 1 ಹುದ್ದೆಗೆ ಎಂಎಸ್ ಡಬ್ಲ್ಯೂ, ಎಂಎಸ್ಸಿ ಗೃಹ ವಿಜ್ಞಾನ (ಮಾನವ ಅಭಿವೃದ್ಧಿ ಮತ್ತು ಕುಟುಂಬ ಸಂಬAಧ), ಮನೋವಿಜ್ಞಾನ, ಮನೋವೈದ್ಯಶಾಸ್ತçಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕೌನ್ಸಿಲಿಂಗ್ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ 30,000/- ವೇತನ ನೀಡಲಾಗುವುದು.

ಕೇಸ್ ವರ್ಕರ್/ಸಮಾಜ ಕಾರ್ಯಕರ್ತ-2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಬಿಎಸ್‌ಡಬ್ಲ್ಯೂ, ಬಿ.ಎ (ಸಮಾಜಶಾಸ್ತç) ಮಹಿಳಾ ಅಧ್ಯಯನದಲ್ಲಿ ಪದವೀಧರಾಗಿರಬೇಕು. ಎರಡು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಮಾಸಿಕ 25,000/-ವೇತನ ನೀಡಲಾಗುವುದು.

ಪ್ಯಾರಲೀಗಲ್ ಪರ್ಸನಲ್ /ಲಾಯರ್ – 2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಕಾನೂನು ಪದವಿ ಜೊತೆಗೆ 2-3 ವರ್ಷಗಳ ಅನುಭವ ಹೊಂದಿರಬೇಕು. ಮಾಸಿಕ 25,000/ ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಒನಕೆ ಓಬವ್ವ ಸ್ಟೇಡಿಯಂ ಹತ್ತಿರ, ಜಿಲ್ಲಾ ಬಾಲಭವನ ಆವರಣ, ಚಿತ್ರದುರ್ಗ ಇ-ಮೇಲ್  [email protected]   ಹಾಗೂ ದೂರವಾಣಿ ಸಂಖ್ಯೆ 08194-234579ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement