ಬೇಕಾಗುವ ಪದಾರ್ಥಗಳು
- ಮೊಟ್ಟೆ- 3
- ಮೊಸರು- ಒಂದು ಬಟ್ಟಲು
- ಮೈದಾ ಹಿಟ್ಟು- 1/4 ಬಟ್ಟಲು
- ವೆನಿಲ್ಲಾ- ಒಂದು ಚಮಚ
- ನಿಂಬೆ ರಸ- ಸ್ವಲ್ಪ
- ಸಕ್ಕರೆ- 1/3 ಬಟ್ಟಲು
- ಐಸಿಂಗ್ ಶುಗರ್- ಸ್ವಲ್ಪ
ಮಾಡುವ ವಿಧಾನ..
- ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಹಾಕಿಕೊಳ್ಳಿ. ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಮತ್ತೊಂದು ಪಾತ್ರೆಗೆ ಮೊಟ್ಟೆಯ ಬಿಳಿ ಭಾಗ ಹಾಗೂ ನಿಂಬೆ ರಸವನ್ನು ಹಾಕಿ ಚೆನ್ನಾಗಿ 1 ನಿಮಿಷ ಬೀಟ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದು ಫೋಮ್ ರೀತಿ ಆಗುತ್ತದೆ.
- ಬಳಿಕ ಈಗಾಗಲೇ ಮಾಡಿಟ್ಟುಕೊಂಡ ಮೊಟ್ಟೆ ಹಾಗೂ ಮೈದಾ ಹಿಟ್ಟಿನ ಮಿಶ್ರಣಕ್ಕೆ ಇದನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಮೌಲ್ಡ್’ಗೆ ಹಾಕಿ ತಮತಟ್ಟಾಗಿಸಿ, ಟ್ರೇ ವೊಂದಕ್ಕೆ ಬಿಸಿ ನೀರು ಹಾಕಿ ಅದರಲ್ಲಿ ಈ ಮೌಲ್ಡ್ ಇರಿಸಿ 150 ಡಿಗ್ರಿ ಬಿಸಿಯಲ್ಲಿ ಸುಮಾರು 45-55 ನಿಮಿಷ ಬೇಸಿಯಿಸಿಕೊಳ್ಳಿ. ಈಗ ಓವನ್‌ನಿಂದ ಕೇಕ್ ಅನ್ನು ತೆಗೆದು, ಆರಲು ಬಿಡಿ. ನಿಧಾನವಾಗಿ ಕೇಕ್ ಅನ್ನು ಪಾತ್ರೆಯಿಂದ ಬೇರ್ಪಡಿಸಿ. ಈಗ ಐಸಿಂಗ್ ಶುಗರ್ ನ್ನು ಕೇಕ್ ಮೇಲೆ ಸಿಂಪಡಿಸಿದರೆ ರುಚಿಕರವಾದ ಯೋಗರ್ಟ್ ಕೇಕ್ ಸವಿಯಲು ಸಿದ್ಧ.