ವಿಷ ಬೆರೆತ ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ.
ಇನ್ನು ಮಗಳ ಸ್ಥಿತಿ ಚಿಂತಾಜನಕವಾಗಿದೆ. ಫುಡ್ ಪಾಯಿಸನ್ನಿಂದ ಹೀಗಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಭೀಮಣ್ಣ (60), ಪತ್ನಿ ಈರಮ್ಮ (54), ಮಗ ಮಲ್ಲೇಶ್ (19), ಪುತ್ರಿ ಪಾರ್ವತಿ (17) ಮೃತರು. ಭೀಮಣ್ಣ ಮತ್ತು ಈರಮ್ಮ ಅವರ ಪುತ್ರಿಯಾದ ಮಲ್ಲಮ್ಮ (18) ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ
ದಾಖಲಿಸಲಾಗಿದೆ.
				
															
                    
                    
                    
                    

































