ಅತೀಯಾದ ಮಳೆ: ಇಲ್ಲಿದೆ ಮನೆ ಹಾನಿಗೆ ಪರಿಹಾರ ಪಡೆಯಲು ಕುರಿತಾದ ಸಂಪೂರ್ಣ ಮಾಹಿತಿ

WhatsApp
Telegram
Facebook
Twitter
LinkedIn

ಈ ವರ್ಷ ಅಂದರೆ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ  ಅತೀಯಾದ ಮಳೆಯಿಂದ/ಅತಿವೃಷ್ಟಿ/ಪ್ರವಾಹದಿಂದ ಹಾನಿಯಾದ ಮನೆ ಪುನರ್ ನಿರ್ಮಾಣ(mane hani parihara-2024) ಹಾಗೂ ದುರಸ್ಥಿ ಕಾರ್ಯಕ್ಕೆ ಜೊತೆಗೆ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಅಧಿಕೃತ ಮಾರ್ಗಸೂಚಿ ಹೊರಡಿಸಿ ಹಣ ಬಿಡುಗಡೆ ಕುರಿತು ಆದೇಶ ಹೊರಡಿಸಲಾಗಿದೆ.

ಮನೆ ಹಾನಿ ಪರಿಹಾರದ  ಆದೇಶದ ವಿವರ ಹೀಗಿದೆ:

ಭಾರತೀಯ ಹವಾಮಾನ ಇಲಾಖೆಯು ದಿನಾಂಕ: 15-04-2024 ರಂದು ನೀಡಿರುವ ಮುನ್ಸೂಚನೆಯಲ್ಲಿ ನೈಋತ್ಯ ಮುಂಗಾರು-2024 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪ್ರಕಾರ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು,  ಅದರಂತೆ ಈಗಾಗಲೇ ರಾಜ್ಯದಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದರಿಂದಾಗಿ ಹಲವಾರು ಮನೆ ಹಾನಿ / ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವುದು ವರದಿಯಾಗಿರುತ್ತದೆ.

ಅದರಂತೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ನೀಡಬಹುದಾದ ಪರಿಹಾರಗಳ ಕುರಿತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11-07-2023 ರಂದು ಹೊರಡಿಸಿರುತ್ತದೆ.

ಸದರಿ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಮಾತ್ರ ರಾಜ್ಯ ವಿಪತ್ತು ಪರಿಹಾರ ನಿಧಿಯ ಅನುದಾನದಲ್ಲಿ ಭರಿಸಲು ಅವಕಾಶವಿರುತ್ತದೆ. ಆದ್ದರಿಂದ ಪ್ರಸ್ತುತ 2024-25 ನೇ ಸಾಲಿನ ಮುಂಗಾರು ಹಾಂಗಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಭಾರಿ ಮಳೆಯಿಂದ ಉಂಟಾಗುವ ನೈಸರ್ಗಿಕ ವಿಪತ್ತುಗಳಿಗೆ, ಭಾರತ ಸರ್ಕಾರವು ದಿನಾಂಕ: 11-07-2023 ರಂದು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತದ ಜೊತೆಗೆ ರಾಜ್ಯ ಸರ್ಕಾದಿಂದ ಅರ್ಹತೆಯಂತೆ ಮನೆ/ಹೆಚ್ಚುವರಿ ಮೊತ್ತವನ್ನು ಪಾವತಿಸಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಈ ಕೆಳಕಂಡಂತೆ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

1) ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 02 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ಸಿ) ವಿಂಗಡಿಸಿ ಪರಿಹಾರ ಪಾವತಿಸುವುದು.

2) ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ Revised Items and Norms of Assistance d ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡುವುದು.

ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯ ವಿವರಗಳನ್ನು ದಾಖಲಿಸುವುದು.

3) ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ರೂ.1.00 ಲಕ್ಷಗಳನ್ನು ಪಾವತಿಸುವುದು ಮತ್ತು ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.

4) ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ನಯ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ.6,500/-ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.43,500/-ಗಳು ಸೇರಿದಂತೆ ಒಟ್ಟು ರೂ.50,000/-ಗಳನ್ನು ಪಾವತಿಸುವುದು.

5) ನೈಸರ್ಗಿಕ ತುರ್ತು ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಒದಗಿಸಿರುವ ಅನುದಾನವನ್ನು ನಂತರ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

6) ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ನಯ ಪ್ರವಾಹದಿಂದ ಬಟ್ಟೆ ಕಳೆದುಕೊಂಡರೆ ರೂ.2,500/- ಹಾಗೂ ಗೃಹೋಪಯೋಗಿ ವಸ್ತುಗಳನ್ನು ಹಾನಿಯಾದರೆ ರೂ.2,500/- ಗಳ ಪರಿಹಾರ ಪಾವತಿಸಲು ನಿಗದಿಯಾಗಿದ್ದು, ಅದರಂತೆ ರೂ.5,000/- ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸುವುದು.

ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮೇಲೆ ತಿಳಿಸಿರುವಂತೆ ಪರಿಹಾರವನ್ನು ಈ ಕೆಳಕಂಡ ಷರತ್ತುಗಳ ಪಾಲನೆಗೆ ಒಳಪಟ್ಟು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ.

ಪರಿಹಾರ ನೀಡಲು ಷರತ್ತುಗಳು:

1) ಜಿಲ್ಲಾಧಿಕಾರಿಗಳು ಪರಿಹಾರ ಮೊತ್ತವನ್ನು ನಿಯಮಾನುಸಾರ ಅರ್ಹ ಸಂತ್ರಸ್ಥರುಗಳಿಗೆ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪರಿಹಾರವನ್ನು ಪಾವತಿಸಲು ಕ್ರಮವಹಿಸುವುದು.

2) ಅತಿವೃಷ್ಟಿ / ಪ್ರವಾಹದಿಂದ ಮನ ಹಾನಿಯ ಬಗ್ಗೆ ಘಟನೆ ನಡೆದ ತಕ್ಷಣ (ಗರಿಷ್ಟ 2 ದಿನಗಳೊಳಗಾಗಿ) ವರದಿಯಾದ 05 ದಿನಗಳ ಒಳಗಾಗಿ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಥಳ ಭೇಟಿ ನೀಡಿ, ಸರ್ವೆ ನಡೆಸಿ, ಹಾನಿ ವಿವರಗಳ ಕುರಿತು ವರದಿಯನ್ನು ತಹಶೀಲ್ದಾರ್‌ರವರಿಗೆ ನೀಡುವುದು.

3) ಮನೆಹಾನಿಯ ಜಂಟಿ ಸಮೀಕ್ಷೆ ವರದಿ ಸ್ವೀಕೃತವಾದ 03 ಕರ್ತವ್ಯದ ದಿನಗಳ ಒಳಗಾಗಿ ತಹಶೀಲ್ದಾರ್‌ರವರು ನಿಯಮಾನುಸಾರ ಪರಿಶೀಲಿಸಿ, ಸದರಿ ವರದಿಯ ಪ್ರಸ್ತಾವನೆಯನ್ನು ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು. ಕುರಿತು

4) ಜಿಲ್ಲಾಧಿಕಾರಿಗಳು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, 07 ಕರ್ತವ್ಯದ ದಿನಗಳ ಒಳಗಾಗಿ ನಿರ್ಧಾರ ಕೈಗೊಂಡು, ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪರಿಹಾರವನ್ನು ಪಾವತಿಸಲು ಕ್ರಮವಹಿಸುವುದು.

5) ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿರುವ ರಾಜ್ಯ ವಿಪತ್ತು ಪರಿಹಾರ ನಿಧಿ ಅನುದಾನವನ್ನು ಮೇಲೆ ತಿಳಿಸಿರುವ ನೈಸರ್ಗಿಕ ವಿಕೋಪಗಳಿಂದ ಉಂಟಾದ ಹಾನಿ ಪ್ರಕರಣಗಳಲ್ಲಿ ಪರಿಹಾರ ಪಾವತಿಸಲು ಬಳಸತಕ್ಕದ್ದು.

6) ಜಿಲ್ಲಾಧಿಕಾರಿಗಳು ಆರ್ಥಿಕ ವರ್ಷದ ಅಂತ್ಯಕ್ಕೆ ನಿಗಧಿತ ನಮೂನೆಯಲ್ಲಿ ಹಣ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸುವುದು.

7) ಸಂತ್ರಸ್ಥರ ಗುರುತಿಸುವಿಕೆಯಲ್ಲಿ ಯಾವುದೇ ರೀತಿಯ ಪುನರಾವರ್ತನೆಯಾಗದಂತೆ ನೋಡಿಕೊಳ್ಳತಕ್ಕದ್ದು.

8) ಪ್ರತಿ ತಿಂಗಳು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮವಾರು ಫಲಾನುಭವಿಗಳ ವಿವರ, ಪಾವತಿಸಲಾಗದ ಪರಿಹಾರದ ಮೊತ್ತದ ವಿವರಗಳ ಮಾಹಿತಿಯನ್ನು ತಯಾರಿಸಿ, ಸಂಬಂಧಪಟ್ಟ ಜಿಲ್ಲಾ ಕಛೇರಿಗಳಲ್ಲಿ, ತಾಲ್ಲೂಕು ಕಛೇರಿಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸತಕ್ಕದ್ದು ಮತ್ತು ಸದರಿ ವಿವರಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ತಮ್ಮ ಜಾಲತಾಣದಲ್ಲಿ (ವೆಬ್‌ಸೈಟ್‌ನಲ್ಲಿ) ಪಾರದರ್ಶಕತೆಗಾಗಿ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು.

9) ಮನೆಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆಯನ್ನು ಹಾಗೂ ಮಾಹಿತಿಯನ್ನು ನಮೂದಿಸುವುದರಲ್ಲಿ ಮತ್ತು ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಭಂದಪಟ್ಟ ಅಧಿಕಾರಿ/ನೌಕರರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು.

ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ವಿವರಗಳನ್ನು ಜಿಲ್ಲಾಧಿಕಾರಿಗಳು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಅನುವಾಗುವಂತೆ, ಸದರಿ ತಂತ್ರಾಂಶವನ್ನು ಈ ಕೂಡಲೇ ಹಾಗೂ ದಿನಾಂಕ:30-09-2024 ರವರೆಗೆ ಸಕ್ರಿಯೆಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ರವರು ಕ್ರಮವಹಿಸುವುದು.

ಅತಿವೃಷ್ಟಿ / ಪ್ರವಾಹದಿಂದ ದಿನಾಂಕ: 01.06.2024 ರಿಂದ ಇದುವರೆವಿಗೂ ಹಾನಿಯಾಗಿರುವ ಮನೆಗಳ ವಿವರ, ಅರ್ಹ ಫಲಾನುಭವಿಗಳ ವಿವರ, ಪಾವತಿಸಲಾದ ಪರಿಹಾರ ಮೊತ್ತ ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಳನ್ನು ಹಾಗೂ 30ನೇ ಸೆಪ್ಟೆಂಬರ್ ರವರೆಗೆ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಮನೆ ಹಾನಿಯ ವಿವರಗಳನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ, ವಿಪತ್ತು ನಿರ್ವಹಣೆ ಮತ್ತು ಸೇವೆರವರು ಆದೇಶ ಹೊರಡಿಸಿದ್ದಾರೆ.

mane hani parihara arji-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ನಿಮ್ಮ ಹಳ್ಳಿಯ ಗ್ರಾಮ ಪಂಚಯತಿ ಕಾರ್ಯಲಯವನ್ನು ನೇರವಾಗಿ ಭೇಟಿ ಮಾಡಿ ಅಥವಾ ನಿಮ್ಮ ಹಳ್ಳಿ ಕಂದಾಯ ಚಾವಡಿ/ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon