ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುವ ಅವಕಾಶ ಇನ್ನೂ ಜೀವಂತ – ಫಲಿಸುವುದೇ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ

ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕ ತೂಗಿದ ಕಾರಣಕ್ಕಾಗಿ 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮೊದಲು ಅನರ್ಹಗೊಂಡ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ 2024 ನಲ್ಲಿ ಬೆಳ್ಳಿ ಪದಕ ಗೆಲ್ಲು ಆಸೆ ಇನ್ನೂ ಜೀವಂತವಾಗಿದೆ.

ಚಿನ್ನದ ಪದಕದ ಪಂದ್ಯವನ್ನು ಪೂರ್ವ ನಿಗದಿಯಂತೆ ಆಡಲಾಗುವುದು ಎಂದು ಮಧ್ಯಸ್ಥಿಕೆ ನ್ಯಾಯಾಲಯ ತಿಳಿಸಿತ್ತು. ನಿಗದಿ ಪಡಿಸಿದ ತೂಕದೊಂದಿಗೆ ಸೆಮಿ ಫೈನಲ್ ಆಡಿ ಗೆದ್ದ ಕಾರಣ ಬೆಳ್ಳಿ ಪದಕವನ್ನು ನೀಡಬೇಕೆಂಬುದು ಎರಡನೇ ಮನವಿಯಾಗಿತ್ತು. ಅದರ ಬಗ್ಗೆ ಚರ್ಚಿಸಿ ನಿರ್ಧರಿಸುವುದಾಗಿ ಸಿಎಎಸ್ ತಿಳಿಸಿತ್ತು.

ಬುಧವಾರ (ಆಗಸ್ಟ್ 7) ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕ ತೂಗಿದ ಕಾರಣಕ್ಕಾಗಿ 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮೊದಲು ಅನರ್ಹಗೊಂಡ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ 2024 ನಲ್ಲಿ ಬೆಳ್ಳಿ ಪದಕ ಗೆಲ್ಲು ಆಸೆ ಇನ್ನೂ ಜೀವಂತವಾಗಿದೆ.

Advertisement

ಗುರುವಾರದ ಇತ್ತೀಚಿಗಿನ ಬೆಳವಣಿಗೆಯ ಪ್ರಕಾರ, ವಿನೇಶ್ ತನ್ನ ಅನರ್ಹತೆಯ ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಎರಡು ಮೇಲ್ಮನವಿ ಸಲ್ಲಿಸಿದ್ದರು. ಮೊದಲನೆಯದದಾಗಿ ತನಗೆ ಮತ್ತೊಮ್ಮೆ ತೂಗಲು ಅವಕಾಶ ಕೊಡಬೇಕು ಎಂದು ಕೋರಿದ್ದರು. ಅದನ್ನು ನ್ಯಾಯಾಲಯ ತಿರಸ್ಕರಿಸಿತು.

ಈಗಾಗಲೇ ಈ ಬಗ್ಗೆ ನಿರ್ಧಾರವನ್ನು ಮಾಡಲಾಗಿದೆ ಮತ್ತು ಚಿನ್ನದ ಪದಕದ ಪಂದ್ಯವನ್ನು ನಿಗದಿಯಂತೆ ಆಡಲಾಗುವುದು ಎಂದು ಮಧ್ಯಸ್ಥಿಕೆ ನ್ಯಾಯಾಲಯ ತಿಳಿಸಿತ್ತು. ನಿಗದಿ ಪಡಿಸಿದ ತೂಕದೊಂದಿಗೆ ಸೆಮಿ ಫೈನಲ್ ಆಡಿ ಗೆದ್ದ ಕಾರಣ ಬೆಳ್ಳಿ ಪದಕವನ್ನು ನೀಡಬೇಕೆಂಬುದು ಎರಡನೇ ಮನವಿಯಾಗಿತ್ತು. ಅದರ ಬಗ್ಗೆ ಚರ್ಚಿಸಿ ನಿರ್ಧರಿಸುವುದಾಗಿ ಸಿಎಎಸ್ ತಿಳಿಸಿತ್ತು. ಇವತ್ತು ದಿನದ ಅಂತ್ಯದೊಳಗೆ ಈ ಕುರಿತ ನಿರ್ಧಾರವನ್ನು ಸಿಎಎಸ್ ಪ್ರಕಟಿಸುವ ಸಾಧ್ಯತೆಯಿದೆ

ಒಲಿಂಪಿಕ್ ಕ್ರೀಡಾಕೂಟದ ಸಮಯದಲ್ಲಿ ಉದ್ಭವಿಸುವ ಯಾವುದೇ ವಿವಾದಗಳ ಪರಿಹಾರಕ್ಕಾಗಿ ಪ್ಯಾರಿಸ್‌ನಲ್ಲಿ CAS ನ ತಾತ್ಕಾಲಿಕ ವಿಭಾಗವನ್ನು ಸ್ಥಾಪಿಸಲಾಗಿದೆ. ಮೊನ್ನೆ ಗುರುವಾರ ಬೆಳಗ್ಗೆ, ವಿನೇಶ್ ಕುಸ್ತಿಯಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದರು, ಇನ್ನು ಮುಂದೆ ತನಗೆ ಮುಂದುವರಿಯುವ ಶಕ್ತಿ ಇಲ್ಲ ಎಂದು ಹೇಳಿದರು.

ತನ್ನ ತಾಯಿ ಪ್ರೇಮಲತಾ ಅವರನ್ನು ಉದ್ದೇಶಿಸಿ, ವಿನೇಶ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ, “ಅಮ್ಮ ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ, ಎಲ್ಲವೂ ಛಿಧ್ರವಾಗಿದೆ ಎಂದು ಅವರು ಬರೆದುಕೊಂಡಿದ್ದರು .”

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement