ಸುಪ್ರೀಂಕೋರ್ಟ್: ಒಳ ಮೀಸಲಾತಿಯ ಪರವಾಗಿ ಐತಿಹಾಸಿಕ ತೀರ್ಪು: ಶ್ರೀ ಮಾದಾರ ಚನ್ನಯ್ಯ ಶ್ರೀ.!

 

ಚಿತ್ರದುರ್ಗ: ಸುಪ್ರೀಂಕೋರ್ಟ್ ಒಳ ಮೀಸಲಾತಿಯ ಪರವಾಗಿ ಐತಿಹಾಸಿಕ ತೀರ್ಪು ಕೊಟ್ಟಿದೆ. ಒಳ ಮೀಸಲಾತಿಯ ಹೋರಾಟ ಮಾದಿಗ ಸಮಾಜದ್ದೇ ಆದರೂ. ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಯ ಅನುಸಾರ ಸಾಮಾಜಿಕ ನ್ಯಾಯವನ್ನು ಒದಗಿಸಲಿದೆ. ಕೇವಲ ಎಸ್.ಸಿ ಮಾತ್ರವಲ್ಲ ಎಸ್.ಟಿ ಸಮುದಾಯದವರಿಗೂ ಇದರ ಲಾಭ ಸಿಗಲಿದೆ ಎಂದು ಶ್ರೀ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಹೂರವಲಯದ ಶ್ರೀಮಠದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಮಾದಿಗ ಸಮಾಜದ ಒಳ ಮೀಸಲಾತಿಯ ಹೋರಾಟಕ್ಕೆ ಮೂರು ದಶಕ ಮೀರಿದ ಇತಿಹಾಸ ಇದೆ. ಹೋರಾಟವನ್ನು ಜನಾಂದೋಲನ / ಬೀದಿ ಹೋರಾಟ, ಕಾನೂನಾತ್ಮಕ ಸಂಘರ್ಷ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ತರುವುದರ ಮೂಲಕ ಮಾಡಲಾಯಿತು. ಇದರಲ್ಲಿ  ಮಾದಾರ ಚೆನ್ನಯ್ಯ ಗುರುಪೀಠ ಮೂರೂ ಆಯಾ ಮದಲ್ಲಿ ತನ್ನ ಇತಿ-ಮಿತಿಯಲ್ಲಿ ಕೈ ಜೋಡಿಸಿ ಕೆಲಸ ಮಾಡಿದೆ.

Advertisement

ಸಮಾವೇಶಗಳು, ಪಾದಯಾತ್ರೆ. ಧರಣಿ ಇತ್ಯಾದಿ ಹೋರಾಟಗಳಲ್ಲಿ ಶ್ರೀ ಮಠ ಸದಾ ಬೆಂಬಲಿಸಿದೆ.  ಮಾದಿಗ ದಂಡೋರಾದ ಎಮ್ ಶಂಕರಪ್ಪ, ತೆಲಂಗಾಣದ ಮಂದಕೃಷ್ಣ ಮಾದಿಗ, ಬಳ್ಳಾರಿ ಹನುಮಂತಪ್ಪ, ಮುತ್ತಣ್ಣ ಬೆನ್ನೂರು ಸೇರಿದಂತೆ ಅನೇಕ ಪ್ರಮುಖ ಹೋರಾಟ ಗಾರರು ನಿರಂತರ ಮಠದ ಜೊತೆಗಿದ್ದಾರೆ.

ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇರಲಿ ಅಥವ ರಾಜ್ಯ / ಕೇಂದ್ರ ಸರಕಾರವಿರಲಿ ಶ್ರೀ ಮಠ ತನ್ನದೇಆದ ರೀತಿಯಲ್ಲಿ ಸಂಪರ್ಕ. ಸಂಬAಧ ಇರಿಸಿಕೊಂಡು ಕಾರ್ಯಸಾಧನೆಯಲ್ಲಿ ತನ್ನ ಪಾತ್ರವಹಿಸಿದೆ ಎಂದರು.

ಈವರೆಗೂ ಒಳಮೀಸಲಾತಿಯ ಕುರಿತಾದ ಸುಪ್ರೀಂಕೋರ್ಟಿನ ತೀರ್ಪನ್ನು ಹಿರಿಯ ದಲಿತನಾಯಕರಾದ ಖರ್ಗೆಯವರು ಸ್ವಾಗತಿಸಿಲ್ಲ. ಹೀಗಿರುವಾಗ ಖರ್ಗೆಯವರು ಕೆನೆಪದರದ ಬಗ್ಗೆ, ಅನಗತ್ಯ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಇದೆಲ್ಲವನ್ನು ಸರಿಯಾಗಿ ನಿರ್ವಹಿಸುವ ಬದ್ಧತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿದೆ ಎಂದು ನಮ್ಮ ನಂಬಿಕೆ.-ಸAಪುಟ ಸಮಿತಿ, ಪರಿಶೀಲಿನಾ ಸಮಿತಿ, ಅಧ್ಯಯನ ಸಮಿತಿ ಇತ್ಯಾದಿ ರಚಿಸಿ ಕಾಲಹರಣ ಮಾಡುವುದು ತುರ್ತಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಲಿ. ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಅಲ್ಲಿಯವರೆಗೆ ಕೆ.ಪಿ.ಎಸ್.ಸಿ ಸೇರಿದಂತೆ ಎಲ್ಲಾ ಸರ್ಕಾರಿ ನೇಮಕಾತಿ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ನಮ್ಮ ಒತ್ತಾಯವನ್ನು ಮಂಡಿಸಲಾಗುವುದು, ನಮ್ಮ ಜನರಲ್ಲಿ ಇದರ ಬಗ್ಗೆ ಜಾಗೃತಿ ಇಲ್ಲವಾಗಿದೆ ಇದರಿಂದ ಅವರು ಇದರ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲಾಗುತ್ತಿಲ್ಲ, ನಾವು ಇದರ ಬಗ್ಗೆ ಮನವರಿಕೆಯನ್ನು ಮೂಡಿಸಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಮಾದಿಗ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಳ್ಳಾರಿ ಹನುಮಂತಪ್ಪ ಮಾತನಾಡಿದರು. ಗೋಷ್ಟಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷರಾದ ಪಾವಗಡ ಶ್ರೀರಾಮ, ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಬೆನ್ನೂರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಯೋಗೀಶ್, ಸಾಗರ್ ಸೇರಿದಂತೆ ಇತರರು ಭಾಗವಹಿಸಿದ್ದರು.

“ ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.”

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement