ಆಂಧ್ರದಲ್ಲಿ ಬಡವರಿಗಾಗಿ 5ರೂ.ಗೆ ಊಟ ನೀಡುವ ಅನ್ನ ಕ್ಯಾಂಟೀನ್ ಮತ್ತೆ ಆರಂಭ

WhatsApp
Telegram
Facebook
Twitter
LinkedIn

ಅಮರಾವತಿ : ಆಂಧ್ರಪ್ರದೇಶದಲ್ಲಿ ಮತ್ತೆ ಅನ್ನ ಕ್ಯಾಂಟೀನ್‌ಗಳು ಪುನರಾರಂಭ ಆಗಿವೆ. ಬಡವರಿಗೆ 5 ರೂ.ಗೆ ಅನ್ನ ನೀಡುವ ಅನ್ನ ಕ್ಯಾಂಟೀನ್‌ಗಳು ಪುನಾರಂಭ ಆಗಿವೆ.

ವೈಎಸ್‌ಆರ್‌ಸಿಪಿ ಸರ್ಕಾರವು 2019 ಮತ್ತು 2024 ರ ನಡುವೆ ಟಿಡಿಪಿಯ ಹಿಂದಿನ ಆಡಳಿತದಲ್ಲಿ ಪ್ರಾರಂಭಿಸಲಾದ ಕ್ಯಾಂಟೀನ್‌ಗಳನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ಅಧಿಕಾರದಲ್ಲಿರುವ ಟಿಡಿಪಿ ಈ ಕ್ಯಾಂಟೀನ್‌ಗಳನ್ನು ಮತ್ತೆ ಆರಂಭಿಸಿವೆ.

ಬಡವರು ಹಸಿವಿನಿಂದ ಬಳಲಬಾರದು ಎಂಬುದು ಈ ಕ್ಯಾಂಟೀನ್‌ಗಳ ಮುಖ್ಯ ಉದ್ದೇಶವಾಗಿದೆ ಎಂದು ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಅನ್ನ ಕ್ಯಾಂಟೀನ್‌ ಬಡವರಿಗೆ, ದಿನಗೂಲಿದಾರರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ಬಡವರ ಖಾಲಿ ಹೊಟ್ಟೆಯನ್ನು ತುಂಬಿಸುವುದಕ್ಕಿಂತ ತೃಪ್ತಿಕರವಾದ ಮತ್ತೊಂದು ಕೆಲಸ ಯಾವುದಿದೆ’ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಜಗನ್‌ ಮೋಹನ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ರಾಜ್ಯದಾದ್ಯಂತ ಇಂತಹ 203 ಕ್ಯಾಂಟೀನ್‌ಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon