ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಮಹಿಳೆಯರೇ ಅರ್ಜಿ ಸಲ್ಲಿಸಿ, ಇಲ್ಲಿದೆ ಮಾಹಿತಿ

2 ಅಥವಾ 3 ತಿಂಗಳಿಗೆ ಒಂದು ಸಾರಿ ಅಂಗನವಾಡಿಯಲ್ಲಿ ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗೆ ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 19 ರಿಂದ 35 ವರ್ಷಗಳ ಒಳಗಿರಬೇಕು. ಅರ್ಜಿ ಸಲ್ಲಿಕೆಗೆ 2024ರ ಸೆಪ್ಟೆಂಬರ್ 9ನೇ ತಾರೀಕು ಕೊನೆಯ ದಿನಾಂಕ ಆಗಿದೆ.

ಅರ್ಹತೆಗಳು: ಅಂಗನವಾಡಿ ಸಹಾಯಕಿ ಹಾಗು ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳೆಯು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಹತೆಗಳು :

Advertisement

*ಪಿಯುಸಿ ಪಾಸ್ ಆಗಿದ್ದು, ಕನ್ನಡ ಭಾಷೆಯನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಓದಿರಬೇಕು.

*ಈ ಹುದ್ದೆಯ ನೇಮಕಾತಿ ಸಮಯದಲ್ಲಿ ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಇಂದ, DSERT ಇಂದ ECCE ಡಿಪ್ಲೊಮಾ, JOC F NTT ಕೋರ್ಸ್, ಜೊತೆಗೆ ಅಂಗನವಾಡಿಗೆ ಬೇಕಾದ ಡಿಪ್ಲೊಮಾ ನ್ಯೂಟ್ರಿಶಿಯನ್, ಹೋಮ್ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಅಥವಾ 1 ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು, ಸರ್ಟಿಫಿಕೇಟ್ ಹೊಂದಿರುವವರಿಗೆ ಪ್ರಾಮುಖ್ಯ ಇರುತ್ತದೆ.

ಈ ಮಹಿಳೆಯರು 10ನೇ ತರಗತಿಯಲ್ಲಿ ಓದಿ, ಪಾಸ್ ಆಗಿರಬೇಕು. ಈಗ ಯಾವೆಲ್ಲಾ ಜಿಲ್ಲೆಗಳಲ್ಲಿ ಈ ಹುದ್ದೆಗಳು ಖಾಲಿ ಇದೆ ಎಂದು ನೋಡುವುದಾದರೆ, ಯಾದಗಿರಿ, ದಾವಣಗೆರೆ, ವಿಜಯನಗರ, ಶಿವಮೊಗ್ಗ, ಹಾಸನ, ಬೆಳಗಾವಿ, ಚಿತ್ರದುರ್ಗ ಈ ಊರುಗಳಲ್ಲಿ ಹುದ್ದೆಗಳು ಖಾಲಿ ಇದೆ.

ಅಗತ್ಯವಿರುವ ದಾಖಲೆಗಳು:

*ಆನ್ಲೈನ್ ಅಪ್ಲಿಕೇಶನ್ ಫಾರ್ಮ್

*ಬರ್ತ್ ಸರ್ಟಿಫಿಕೇಟ್, 10ನೇ ತರಗತಿ ಮಾರ್ಕ್ಸ್ ಕಾರ್ಡ್

*ವಿದ್ಯಾರ್ಹತೆ ಹೊಂದಿರುವ ಮಾರ್ಕ್ಸ್ ಕಾರ್ಡ್

*3 ವರ್ಷದಿಂದ ವಾಸವಿರುವ ವಾಸಸ್ಥಳ ದೃಢೀಕರಣ ಪತ್ರ, ಇದನ್ನು ತಹಸೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅವರಿಂದ ಪಡೆದಿರಬೇಕು.

*ಕ್ಯಾಸ್ಟ್ ಸರ್ಟಿಫಿಕೇಟ್

*ವಿಧವೆ ಆದರೆ, ಅವರ ಪ್ರಮಾಣ ಪತ್ರ ಹಾಗೂ ಗಂಡನ ಡೆತ್ ಸರ್ಟಿಫಿಕೇಟ್

*ಅಂಗವಿಕಲರಾದರೆ ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್

*ವಿಚ್ಛೇದನ ಪಡೆದಿದ್ದರೆ, ಅದರ ಸರ್ಟಿಫಿಕೇಟ್

*ದೇವದಾಸಿಯರು ಎಂದರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರ.

*ಸುಧಾರಣಾ ಸಂಸ್ಥೆಯಲ್ಲಿ ಮಿನಿಮಮ್ ಮೂರು ವರ್ಷ ಇರಬೇಕು.

*ನಿರಾಶ್ರಿತರಾದರೆ ತಹಸೀಲ್ದಾರ್ ಇಂದ ಪತ್ರ ಪಡೆದಿರಬೇಕು.

*ಆಧಾರ್ ಕಾರ್ಡ್/ವೋಟರ್ ಐಡಿ/ರೇಷನ್ ಕಾರ್ಡ್ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ದೃಢೀಕರಣ ಪತ್ರ ಇರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ;

*ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ಕರ್ನಾಟಕ ಒನ್ ಕಛೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಮೊದಲಿಗೆ ನೀವು https://karnemakaone.kar.nic.in/abcd/ApplicationForm_JA_org.aspx ಈ ಲಿಂಕ್ ಗೆ ಭೇಟಿ ನೀಡಿ.

*ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ. *ಈಗ ಸೆಲೆಕ್ಟ್ ಪ್ರಾಜೆಕ್ಟ್ ಎನ್ನುವ ಆಪ್ಶನ್ ನಲ್ಲಿ ಪ್ರಾಜೆಕ್ಟ್ ಅನ್ನು ಸೆಲೆಕ್ಟ್ ಮಾಡಿ. *ಈ ಹೊಸ ಪೇಜ್ ನಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, ನಂತರ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.

ನಂತರ ಈ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ಮಾಡಿಸಿಕೊಳ್ಳಿ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement