ಪಾಶ್ರ್ವನಾಥ ವಿದ್ಯಾ ಸಂಸ್ಥೆ: ಶಾಲಾ ಮಕ್ಕಳಿಗಾಗಿ ರಕ್ಷಾ ಬಂಧನ

 

 

ಚಿತ್ರದುರ್ಗ : ನಗರದ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಆಡಿಯಲ್ಲಿ ಸೋಮವಾರ ರಕ್ಷಾ ಬಂಧನ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪಾಶ್ರ್ವನಾಥ ವಿದ್ಯಾ ಸಂಸೈಯ ಉಪಾಧ್ಯಕ್ಷರಾದ ಉತ್ತಮಚಂದ್ ಸುರಾನ ಮಾತನಾಡಿ, ಸೋದರತ್ವದ ಭಾಂದವ್ಯ ಸಾರುವ ಹಬ್ಬವೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯವ ಮಧ್ಯೆ ಪ್ರೀತಿಯನ್ನು ಮೂಡಿಸುವ ಹಬ್ಬವಾಗಿ ರಾಖಿ ಹಬ್ಬ ದ್ವಾಪರಯುಗದಿಂದಲೂ ಸಹಾ ಆಚರಣೆಯಲ್ಲಿ ಇದೆ ನಮ್ಮ ಶಾಲೆಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ಶಾಲೆಯಲ್ಲಿ ಅಭ್ಯಾಸವನ್ನು ಮಾಡುವ ಮಕ್ಕಳಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಸೋದರಿಗೆ ರಕ್ಷಣೆಯ ಭರವಸೆಯನ್ನು ನೀಡುವ ಸೋದರತೆಯನ್ನು ಸಾರುವ ರಕ್ಷಾ ಬಂಧನಕ್ಕೆ ಶತಮಾನಗಳ ಇತಿಹಾಸ ಇದೆ, ಪೌರಾಣಿಕ ಹಿನ್ನಲೆಯನ್ನು ಸಹಾ ಹೊಂದಿದೆ. ರಕ್ಷಾ ಬಂಧನ ಎನ್ನುವುದು ಪವಿತ್ರವಾದ ಸಂಸ್ಕøತ ಪದವಾಗಿದೆ. ರಕ್ಷಣೆಯ ಬಂಧ ಎಂದು ಇದರ ಅರ್ಥ, ರಕ್ಷಾ ಬಂಧನದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ಏಳ್ಗೆಯನ್ನು ಬಯಸುತ್ತಾರೆ. ಭಗವಂತ ಇವರಿಗೆ ಧೀರ್ಘಾಯಷ್ಯಕ್ಕಾಗಿ ವ್ರತವನ್ನು ಆಚರಣೆ ಮಾಡುತ್ತಾ ಸಹೋದರನ ಮಣಿ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾರೆ. ಇದರ ಮೂಲಕ ಸಹೋದರನಿಂದ ರಕ್ಷಣೆಯನ್ನು ಭರವಸೆಯನ್ನು ಪಡೆಯುತ್ತಾರೆ. ಇದರೊಂದಿಗೆ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತಾನಲ್ಲದೆ ಸಹೋದರ-ಸಹೋದರಿಯ ನಡುವಿನ ಸಂಬಂಧ ಬಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾ ಕಾರ್ಯದರ್ಶಿ ಸುರೇಶ್ ಮುತ್ತ, ಖಂಜಾಚಿ ರಾಜೇಂದ್ರ ದಲೇಷಾ, ಮುಖ್ಯ ಶಿಕ್ಷಕಿಯಾದ ನಾಜಿಮಾ ಶಾಂತಕುಮಾರಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು, ತದ ನಂತರ ಮಕ್ಕಳಿಂದ ರಕ್ಷಾ ಬಂಧನ ಕುರಿತಾ ನೃತ್ಯ ಪ್ರದರ್ಶನವಾಯಿತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement