ಬೆಂಗಳೂರು: ಏರ್‌ಪೋರ್ಟ್‌ನಿಂದ ಪಿಕ್‌ಅಪ್ ಶುಲ್ಕ ಹೆಚ್ಚಿಸಿದ ಓಲಾ, ಊಬರ್

WhatsApp
Telegram
Facebook
Twitter
LinkedIn

ಬೆಂಗಳೂರು: ಓಲಾ, ಊಬರ್ ಹಾಗೂ ಆ್ಯಪ್ ಆಧಾರಿತ ವಾಹನಗಳ ಬಳಕೆಯ ಸೇವಾ ದರ ಇನ್ಮುಂದೆ ಮತ್ತಷ್ಟು ತುಟ್ಟಿಯಾಗಿದೆ. ಊಬರ್ ಮತ್ತು ಓಲಾ ಸೇರಿದಂತೆ ಕ್ಯಾಬ್ ಆಪರೇಟರ್‌ಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಿಕ್ ಅಪ್ ಶುಲ್ಕವನ್ನು 40% ರವರೆಗೆ ಹೆಚ್ಚಿಸಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ತನ್ನ ರಿಯಾಯಿತಿ ಒಪ್ಪಂದದ ನವೀಕರಣದ ಭಾಗವಾಗಿ ಶುಲ್ಕವನ್ನು ಹೆಚ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮನಿ ಕಂಟ್ರೋಲ್‌ ವರದಿ ಮಾಡಿದೆ. ಪಿಕ್‌ಅಪ್ ದರವನ್ನು ವಿಮಾನ ನಿಲ್ದಾಣ ಪ್ರಾಧಿಕಾರ 22-40%ರಷ್ಟು ಏರಿಸಿರುವುದರಿಂದ ನಾವೂ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿದೆ ಎಂದು ಪ್ರಯಾಣಿಕರಿಗೆ ಈ ಸೇವೆಗಳ ಚಾಲಕರು ಹೇಳುತ್ತಿದ್ದಾರೆ. ಉಬರ್‌ನ ವಿಮಾನ ನಿಲ್ದಾಣದ ಪಿಕಪ್ (ಟರ್ಮಿನಲ್ 1) ಪ್ರತಿ ರೈಡ್ ಶುಲ್ಕ 187.62 ರಿಂದ 260.78 ಕ್ಕೆ ಏರಿಕೆಯಾಗಿದೆ/ ಅದೇ ರೀತಿ, ಪ್ರತಿ ಟ್ರಿಪ್‌ಗೆ ಓಲಾ ‘ಟ್ರಾನ್ಸ್‌ಪೋರ್ಟ್ ಹಬ್ ಚಾರ್ಜ್’ ರೂ 172 ರಿಂದ ರೂ 215 ಕ್ಕೆ ಏರಿದೆ. ಬ್ಲೂಸ್ಮಾರ್ಟ್ ಪ್ರತಿ ಟ್ರಿಪ್‌ಗೆ ರೂ 218 ರಿಂದ ಶುಲ್ಕವನ್ನು ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಕ್ಯಾಬ್ ಪಿಕ್-ಅಪ್ ಶುಲ್ಕಗಳು ಟರ್ಮಿನಲ್ 1ಕ್ಕಿಂತ ಹೆಚ್ಚಾಗಿದೆ. ಉದಾಹರಣೆಗೆ, ಉಬರ್‌ನ ಪಿಕ್-ಅಪ್ ಶುಲ್ಕವು ಟರ್ಮಿನಲ್ 1 ನಲ್ಲಿ 23 ಪ್ರತಿಶತ ಮತ್ತು ಟರ್ಮಿನಲ್ 2 ನಲ್ಲಿ 40 ಪ್ರತಿಶತದಷ್ಟು ಹೆಚ್ಚಾಗಿದೆ. ಎರಡೂ ಅಗ್ರಿಗೇಟರ್‌ಗಳಿಗೆ ಪಿಕ್-ಅಪ್ ಶುಲ್ಕದಲ್ಲಿನ ಹೆಚ್ಚಳವು ಶೇ 22 ಮತ್ತು ಶೇ 40 ನಡುವೆ ಬದಲಾಗುತ್ತದೆ ಎನ್ನುತ್ತವೆ ಮೂಲಗಳು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

BC Suddi   About Us
For Feedback - [email protected]

Related News

LATEST Post

WhatsApp Icon Telegram Icon