ನ್ಯೂಯಾರ್ಕ್: ಎಜುಕೇಶನಲ್ ಕ್ರೆಡೆನ್ಶಿಯಲ್ಸ್ ಅಸೆಸ್ಮೆಂಟ್ (ECA) ಸಂಸ್ಥೆಯ ಅಂತಾರಾಷ್ಟ್ರೀಯ ಜೀವನ ವೆಚ್ಚದ ಶ್ರೇಯಾಂಕಗಳ ಪ್ರಕಾರ ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್ ಅಗ್ರಸ್ಥಾನ ಪಡೆದುಕೊಮಡಿದೆ. ವಲಸಿಗರ ಪಾಲಿಗೆ ಈ ನಗರ ದುಬಾರಿಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಇನ್ನು ಈ ಪಟ್ಟಿಯಲ್ಲಿ ಹಾಂಕಾಂಗ್ ನಗರ ಎರಡನೇ ಸ್ಥಾನದಲ್ಲಿದ್ದರೆ, ಜಿನೀವಾ, ಲಂಡನ್, ಸಿಂಗಾಪುರ ಕೂಡ ಮೊದಲ ಐದು ಸ್ಥಾನಗಳಲ್ಲಿ ಇವೆ. ಜ್ಯೂರಿಚ್, ಸ್ಯಾನ್ ಫ್ರಾನ್ಸಿಸ್ಕೋ, ಟೆಲ್ ಅವಿವ್, ಸಿಯೋಲ್, ಟೋಕಿಯೊ ನಗರಗಳು ಟಾಪ್ 10 ಪಟ್ಟಿಯ ಅತ್ಯಂತ ದುಬಾರಿ ನಗರಗಳಲ್ಲಿ ಸೇರಿವೆ.