ದೇಹದ ಮೂಳೆಗಳು ಗಟ್ಟಿಯಾಗಿರಲು ಈ ಆಹಾರ ಕ್ರಮ ಪಾಲಿಸಿ

ದೇಹ ಮೂಳೆಗಳಿಂದ ಕೂಡಿದ್ದು, ಆರೋಗ್ಯಕರ ದೇಹಕ್ಕೆ ಆರೋಗ್ಯಕರ ಮೂಳೆಗಳು ಇರುವುದು ಅಗತ್ಯ. ಮೂಳೆಗಳು ಆರೋಗ್ಯವಾಗಿದ್ದರೆ ಮಾತ್ರ ಸಣ್ಣ ಪುಟ್ಟ ಏಟಿಗೆ ಮೂಳೆ ಮುರಿತದಂತಹ ಸಮಸ್ಯೆಗಳಿಂದ ತಪ್ಪಿಸಬಹುದು. ವಯಸ್ಸಾಗುತ್ತಾ ಹೋದಂತೆ ಮೂಳೆಗಳಲ್ಲಿ ಆಗುವ ಬದಲಾವಣೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ದೇಹದ ಮೂಳೆಗಳು ಗಟ್ಟಿಯಾಗಲು ಅತ್ಯುತ್ತಮ ಆರೋಗ್ಯಕ್ಕಾಗಿ ಪೋಷಕಾಂಶಭರಿತ ಆಹಾರ, ಖನಿಜಾಂಶಗಳು ಹೊಂದಿರುವ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಂಶಗಳಿರುವ ಆಹಾರ ಸೇವಿಸುವುದು ಒಳ್ಳೆಯದು.

ಏಕೆಂದರೆ ದೇಹದ ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ದೀರ್ಘಕಾಲದವರೆಗೆ ಅವುಗಳನ್ನು ಬಲಪಡಿಸಲು ಈ ಕೆಲ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಿದರೆ ಇನ್ನೂ ಉತ್ತಮ. ಹಾಲು:ಹಾಲು ಹಾಗೂ ಇತರ ಡೈರಿ ಉತ್ಪನ್ನಗಳಾದ ಮೊಸರು, ತುಪ್ಪ, ಚೀಸ್, ಬೆಣ್ಣೆ ಇತ್ಯಾದಿಗಳ ಸೇವೆಯು 150-250mg ರಷ್ಟು ಕ್ಯಾಲ್ಸಿಯಂ ಒದಗಿಸುತ್ತದೆ. ಈ ಆಹಾರಗಳು ಮೂಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬಲವಾಗಿಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಮುಖ್ಯವಾಗಿ ವಯಸ್ಸಾದವರು ಮೊಸರಿನ ಸೇವನೆ ಮೂಲಕ ಮೂಳೆ ಮುರಿತ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಆದ್ದರಿಂದ ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು.

ಕೆನೆ ತೆಗೆದ ಹಾಲು ಹೆಚ್ಚು ಕ್ಯಾಲ್ಸಿಯಂ ಹೊಂದಿರುತ್ತದೆ. ಗಟ್ಟಿಯಾದ ಚೀಸ್‌ಗಳು ಮೃದುಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಒಳಗೊಂಡಿರುತ್ತವೆ. ಹೀಗಾಗಿ ಪ್ರತಿನಿತ್ಯ ಹಾಲು ಮತ್ತು ಮೊಸರಿನ ಸೇವನೆ ಇರಲಿ ಎನ್ನುತ್ತಾರೆ ವೈದ್ಯರು. ಮೊಟ್ಟೆ:ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲ. ಅದರಲ್ಲೂ ವಿಶೇಷವಾಗಿ ಮೊಟ್ಟೆಯ ಹಳದಿ ಲೋಳೆ ಮೂಳೆ ಗಟ್ಟಿಯಾಗಲು ಉತ್ತಮ, ಮೊಟ್ಟೆ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಬಹುದು. ಮೂಳೆಗಳು ಅನೇಕ ಖನಿಜಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಕ್ಯಾಲ್ಸಿಯಂ ಅನ್ನು ಮೂಳೆಗಳಿಗೆ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಮೂಳೆಗಳು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತವೆ. ಆದ್ದರಿಂದ ದೇಹದಲ್ಲಿ ಈ ಖನಿಜದ ಕೊರತೆಯಿದ್ದರೆ ಕ್ಯಾಲ್ಸಿಯಂ ಮೂಳೆಗಳಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

Advertisement

ತರಕಾರಿಗಳು:ಪ್ರತಿದಿನ ಹಸಿರು ಸೊಪ್ಪು, ತರಕಾರಿಗಳು ಪೌಷ್ಠಿಕಾಂಶದ ಉತ್ತಮ ಮೂಲ. ಕೋಸುಗಡ್ಡೆ ಮತ್ತು ಎಲೆಕೋಸು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಬಾದಾಮಿ ಮತ್ತು ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಕಂಡು ಬರುತ್ತದೆ. ಪಾಲಕ್ ನಂತಹ ಹಸಿರು ಸೊಪ್ಪುಗಳು ಮೂಳೆಗಳಿಗೆ ಬಹಳ ಮುಖ್ಯ. 1 ಕಪ್ ಪಾಲಕ್ ನಲ್ಲಿ ದೈನಂದಿನ ಅಗತ್ಯದ 25% ನಷ್ಟು ಕ್ಯಾಲ್ಸಿಯಂ ಇದೆ ಎನ್ನಲಾಗುತ್ತದೆ. ಹಣ್ಣುಗಳು:ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಂಶವಿರುವ ಕಿತ್ತಳೆ, ಮೂಸಂಬಿ, ನೆಲ್ಲಿಕಾಯಿಯಂತಹ ಹಣ್ಣುಗಳನ್ನು ಆಗಾಗ ಸೇವಿಸುತ್ತಿರಬೇಕು. ಪ್ರತಿದಿನ ಸೇವಿಸಿದರೆ ಇನ್ನೂ ಒಳ್ಳೆಯದು. ಹಣ್ಣುಗಳ ಜ್ಯೂಸ್, ಮಿಲ್ಕ್ ಶೇಕ್‌ನಂತಹ ಆಹಾರಗಳು ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ಜೊತೆಗೆ ಮೂಳೆಗಳು ಶುಷ್ಕವಾಗಿ ಮುರಿತವಾಗುವ ಅಪಾಯವನ್ನು ಇದು ತಡೆಯುತ್ತದೆ.

ನಡಿಗೆ:ನಮ್ಮ ದೇಹದ ಮೂಳೆಗಳು ಸದೃಡವಾಗಿರಲು ವಿಟಮಿನ್ ಡಿ ಅಂಶ ಹೆಚ್ಚು ಅಗತ್ಯ. ಸಾಮಾನ್ಯವಾಗಿ ವಿಟಮಿನ್ ಡಿ ಸೂರ್ಯನ ಬೆಳಕಿನಿಂದ ಪಡೆಯಬಹುದು. ಎಲ್ಲಾ ವಯೋಮಾನದವರಿಗೂ ದೇಹದ ಸರ್ವತೋಮುಖ ಆರೋಗ್ಯಕ್ಕೆ ನಡಿಗೆ ಒಳ್ಳೆಯದು. ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹದಲ್ಲಿ ಬೊಜ್ಜು ಶೇಖರಣೆಯಾಗದಂತೆ ತಡೆದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ದಿನನಿತ್ಯ ಊಟದ ಬಳಿಕ ಹಾಗೂ ಬೆಳಗ್ಗೆಯ ಸಮಯ ಅರ್ಧಗಂಟೆ ವಾಕಿಂಗ್ ಮಾಡುವುದು ಒಳ್ಳೆಯದು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement