ಸಾಮಾಜಿಕ ಬದ್ದತೆ ಬರಹಗಾರನಿಗೆ ಇರಬೇಕು: ಡಾ.ಬಂಜಗೆರೆ ಜಯಪ್ರಕಾಶ್.!

 

ಚಿತ್ರದುರ್ಗ : ಸಾಮಾಜಿಕ ಬದ್ದತೆ ಬರಹಗಾರನಿಗೆ ಇರಬೇಕು. ಅವಕಾಶ ವಂಚಿತರು ಕೆಲವೊಮ್ಮೆ ರಾಜಿಕಬೂಲಿಗೆ ಒಳಗಾದರೆನ್ನುವ ಅಪವಾದ ಬರುವುದು ಸಹಜ ಎಂದು ಜನಪರ ಹೋರಾಟಗಾರ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ಐ.ಎಂ.ಎ.ಹಾಲ್ನಲ್ಲಿ ರಶ್ಮಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಮನಸ್ವಿ ಪ್ರೊ.ಎಚ್.ಲಿಂಗಪ್ಪನವರ ಬದುಕು-ಬರಹ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಪ್ರೊ.ಎಚ್.ಲಿಂಗಪ್ಪನವರು ಇಳಿಯ ವಯಸ್ಸಿನಲ್ಲಿಯೂ ಕೃತಿಗಳನ್ನು ಬರೆಯುತ್ತಿರುವುದು ದೊಡ್ಡ ಸಾಧನೆ. ಲೇಖನ ಸಂಗ್ರಹಿಸುವ, ವಿಭಜಿಸುವ, ವಿನ್ಯಾಸ ಆಕರ್ಷಣೀಯವಾದೆ. ದಮನಿತರ ಪರ ಸದಾ ಚಿಂತಿಸುವ ಆಲೋಚನೆಯನ್ನಿಟ್ಟುಕೊಂಡು ಕೃತಿಗಳನ್ನು ಬರೆದಿದ್ದಾರೆ. ಧಮನಿತ, ಶೋಷಣೆಗೆ ಒಳಗಾದವರು ಉನ್ನತ ಸ್ಥಾನಕ್ಕೆ ಹೋದಾಗ ಮಾನವೀಯತೆಯನ್ನು ಮರೆಯುತ್ತಾರೆ. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಜೀವಿತಾವಧಿಯ ಕೊನೆ ಕಾಲದಲ್ಲಿ ಸಾಕಷ್ಟು ಖಿನ್ನತೆ, ಹಿಂಸೆ ಅನುಭವಿಸಿದರು. ಆಧ್ಯಾತ್ಮಿಕ ಸಾಧನವನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬೇಕೆಂಬುದು-ಅವರ ಆಸೆಯಾಗಿತ್ತು ಎಂದರು.

ಬರಹಗಾರ ಜಾಗೃತಿಯಿಂದ ಜೀವನದ ಸಾಧನೆ, ವಿಧಾನಗಳನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಕರ್ತವ್ಯ ಪ್ರಜ್ಞೆ ಮುಖ್ಯ. ಆ ವಿಚಾರದಲ್ಲಿ ಪ್ರೊ.ಎಚ್.ಲಿಂಗಪ್ಪ ಸಾಮಾಜಿಕ ಬದ್ದತೆ ಉಳಿಸಿಕೊಂಡಿದ್ದಾರೆ. ಬರವಣಿಗೆಯ ಜೊತೆ ದಲಿತ ಪರ ಚಿಂತಕರು, ಹೋರಾಟಗಾರರು ಎಂದು ಬಣ್ಣಿಸಿದರು.

ಜಾನಪದ ವಿದ್ವಾಂಸ ಡಾ.ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ ಪುಸ್ತಕ ಬಿಡುಗಡೆಗೊಳಿಸಿದರು. ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ ಪ್ರೊ.ಎಚ್.ಲಿಂಗಪ್ಪನವರ ಬದುಕು-ಬರಹದಲ್ಲಿ ತಾಯ್ತನ ಅಡಗಿದೆ. ಬುದ್ದ, ಬಸವ, ಅಂಬೇಡ್ಕರ್ರವರಲ್ಲಿದ್ದ ತಾಯ್ತನವನ್ನು ಅಧ್ಯಯನ ಮಾಡಿ ಲೇಖಕರು ಪುಸ್ತಕ ಹೊರ ತಂದಿದ್ದಾರೆ. ಸಮಾನತೆ ತತ್ವ ಈ ಕೃತಿಯಲ್ಲಿದೆ ಎಂದು ಗುಣಗಾನ ಮಾಡಿದರು.

ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಬಿ.ಎಂ.ಗುರುನಾಥ್ ಮತ್ತು ಜಾನಪದ ಹಾಡುಗಾರ ಹರೀಶ್ ಇವರುಗಳು ಪ್ರಾರ್ಥಿಸಿದರು. ಇತಿಹಾಸ ಪ್ರಾಧ್ಯಾಪಕ ಎಸ್.ಎನ್.ಮಹಂತೇಶ್ ನಿರೂಪಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಶ್ರೀಮತಿ ಯಶೋದ ಬಿ.ರಾಜಶೇಖರಪ್ಪ, ಟಿ.ವಿ.ಸುರೇಶ್ಗುಪ್ತ, ಜಿ.ಎಸ್.ಉಜ್ಜಿನಪ್ಪ, ದೊಡ್ಡಮಲ್ಲಯ್ಯ, ಬಿ.ಪಿ.ತಿಪ್ಪೇಸ್ವಾಮಿ

ಮುದ್ದುರಂಗಪ್ಪ, ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ್ ಪೋತೆ, ಲಕ್ಷ್ಮಿಕಾಂತ್ ಸೇರಿದಂತೆ ಪ್ರೊ.ಎಚ್.ಲಿಂಗಪ್ಪನವರು ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement