ಶೀಘ್ರದಲ್ಲೇ ಕಾಣಿಸಲಿದೆ ಅಪರೂಪದ ಧೂಮಕೇತು ‘ಅಟ್ಲಾಸ್’

ಉಡುಪಿ: ಅಪರೂಪದ ಧೂಮಕೇತು ಅಟ್ಲಾಸ್ ಇದೀಗ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಮತ್ತೆ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ, ವಿಜ್ಞಾನಿ ಡಾ.ಎ.ಪಿ. ಭಟ್ ತಿಳಿಸಿದ್ದಾರೆ. 2023ರ ಜನವರಿ ತಿಂಗಳಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿ ಇದನ್ನು ಮೊದಲು ನೋಡಿ ಶತಮಾನದ ಧೂಮಕೇತು ಎಂದು ಬಣ್ಣಿಸಲಾಗಿತ್ತು. ಆದರೆ ಈಗ ಅದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದೆ. ಈ ಧೂಮಕೇತುವಿನ ಹೆಸರು ಸುಚಿನ್ಸನ್- ಅಟ್ಲಾಸ್. ಇದು ಸಪ್ಟೆಂಬ‌ರ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಕಣ್ಣಿಗೆ ಕಾಣಲಿದೆ ಎನ್ನಲಾಗುತ್ತಿದೆ. ಸೌರ ವ್ಯೂಹದ ಹೊರವಲಯ ಊರ್ಸ್ ಕ್ಲೌಡ್‌ನಿಂದ (ಸುಮಾರು 3 ಜ್ಯೋತಿರ್ವರ್ಷ=30 ಟ್ರಿಲಿಯನ್ ಕಿಮೀ) ದೂರದಿಂದ ಹೊರಟ ಈ ಧೂಮಕೇತು, ಸೆಕೆಂಡಿಗೆ ಸುಮಾರು 80 ಕಿ.ಮೀ. ವೇಗದಲ್ಲಿ ಕ್ರಮಿಸುತ್ತಾ ಸಪ್ಟಂಬರ್ 27ರಂದು ಸೂರ್ಯ ನನ್ನು ಸಮೀಪಿಸಲಿದೆ. ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯ ನಿಂದ ಹಿಂದಿರುಗುವಾಗ ಅಕ್ಟೋಬ‌ರ್ ಸಂಜೆಯಲ್ಲಿ ಪಶ್ಚಿಮ ಆಕಾಶದಲ್ಲಿ ಬರಿಕಣ್ಣಿಗೆ ಕಾಣಿಸಿಕೊಳ್ಳಲಿದೆ. ಇದು ಅಕ್ಟೋಬ‌ರ್ 12ರಂದು ಭೂಮಿಗೆ ಸಮೀಪಿಸಲಿದೆ. 2023ರ ಜನವರಿಯಲ್ಲಿ ಪ್ರಥಮ ಬಾರಿಗೆ ದೂರದರ್ಶಕದಲ್ಲಿ ನೋಡಿ 2024ರ ಸಪ್ಟೆಂಬರ್-ಅಕ್ಟೋಬರ್‌ಗೆ ಇದೊಂದು ಶತಮಾನದ ಧೂಮಕೇತು ವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ವರ್ಷದ ಫೆಬ್ರವರಿ ಸುಮಾರಿಗೆ ಇದು ಕಾಣೆಯಾದಾಗ ಧೂಮಕೇತು ಸಿಡಿದು ಹೋಯಿತು ಎನ್ನಲಾಯ್ತು. ಈಗ ಇದರ ತುಂಡೋ ಅಥವಾ ಮೂಲ ಧೂಮ ಕೇತುವೂ ಅಂತೂ ದೂರದರ್ಶಕಕ್ಕೆ ಪುನಃ ಗೋಚರಿಸಿದಾದ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಡಾ.ಎ.ಪಿ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement