ಬೇಕಾಗುವ ಪದಾರ್ಥಗಳು…
- ಮೆಂತ್ಯೆ ಸೊಪ್ಪು- ಸ್ವಲ್ಪ
- ಮಟನ್- ಅರ್ಧ ಕೆಜಿ
- ತೆಂಗಿನ ಹಾಲು- ಸ್ವಲ್ಪ
- ಅರಿಶಿಣದ ಪುಡಿ- ಸ್ವಲ್ಪ
- ಬೆಳ್ಳುಳ್ಳಿ-ಶುಂಠಿ-ಸ್ವಲ್ಪ
- ಹಸಿ ಮೆಣಸಿನಕಾಯಿ-3-4
- ಗರಂ ಮಸಾಲಾ ಪುಡಿ- ಅರ್ಧ ಚಮಚ
- ಈರುಳ್ಳಿ- 1
- ಟೊಮ್ಯಾಟೊ-1 ಚಿಕ್ಕದ್ದು
- ಎಣ್ಣೆ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಹೆಚ್ಚಿದ ಈರುಳ್ಳಿ, ಅರಿಶಿಣ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದರಲ್ಲಿ ರುಬ್ಬಿಟ್ಟುಕೊಂಡ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಆಮೇಲೆ ಇದಕ್ಕೆ ಮಟನ್ ಹಾಕಿ ಮತ್ತೆ ಫ್ರೈ ಮಾಡಿ.
- ನಂತರ ಅದಕ್ಕೆ ಹೆಚ್ಚಿದ ಮೆಂತ್ಯೆ ಸೊಪ್ಪು ಹಾಕಿ ನಂತರ ಹಸಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ಕೊಬ್ಬರಿ ಹಾಲು ಹಾಗೂ ಗರಂ ಮಸಾಲಾ ಪೌಡರ್ ಹಾಕಿ ಕುದಿಯಲು ಬಿಡಿ. ನಂತರ ಸ್ವಲ್ಪ ಉಪ್ಪು ಹಾಕಿ ಮತ್ತೆ ಕುದಿಸಿ. ಕೊನೆಯಲ್ಲಿ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿದರೆ ಮೆಂತ್ಯೆ ಮಟನ್ ಗ್ರೇವಿ ಸವಿಯಲು ಸಿದ್ಧ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ