ಮುಂಬೈ : ಕಿರಣ್ ರಾವ್ ಅವರ ಚೊಚ್ಚಲ ನಿರ್ದೇಶನದ ಬಾಲಿವುಡ್ನ ‘ಲಾಪತಾ ಲೇಡಿಸ್’ ಸಿನಿಮಾವು 2025ರ ಆಸ್ಕರ್ಗೆ ನಾಮ ನಿರ್ದೇಶನಗೊಂಡಿದೆ.
ಆಮೀರ್ ಖಾನ್ ನಿರ್ಮಾಣದ ಮತ್ತು ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾವು 97ನೇ ಆಸ್ಕರ್ಗೆ ಭಾರತವನ್ನು ಪ್ರತಿನಿಧಿಸಲಿದೆ. 2025ರ ಆಸ್ಕರ್ ರೇಸ್ನಲ್ಲಿ ‘ಲಾಪತಾ ಲೇಡಿಸ್’ ಸಿನಿಮಾದೊಂದಿಗೆ 29 ಸಿನಿಮಾಗಳಿವೆ.
‘ಲಾಪತಾ ಲೇಡಿಸ್’ ಸಿನಿಮಾವು 2025ರ ಆಸ್ಕರ್ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ ಎಂದು ಇಂದು ಚೆನ್ನೈನಲ್ಲಿ ಫಿಲಂ ಫೆಡರೇಶನ್ ಆಫ್ ಇಂಡಿಯಾ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದೆ. ಇದರೊಂದಿಗೆ 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಸಿನಿಮಾಗಳನ್ನು ನೋಡಿ ಅವುಗಳ ಪೈಕಿ ‘ಲಾಪತಾ ಲೇಡಿಸ್’ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ.
ಇನ್ನು ಕಳೆದ ವರ್ಷ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ