17 ದಿನಗಳ ಕಾಲ ವಿದ್ಯಾರ್ಥಿಗಳಿಗೆ ದಸರಾ ರಜೆ: ಈ ಶಾಲೆಗಳಿಗೆ ರಜೆ ಅನ್ವಯವಾಗುವುದಿಲ್ಲ..?

ಬೆಂಗಳೂರು :ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ದಸರಾ ರಜೆ ನೀಡಲಾಗಿದೆ. ಆದರೆ ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿಗೆ ಈ ರಜೆಗಳು ಅನ್ವಯವಾಗುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.

ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಕೇಂದ್ರ ಪಠ್ಯಕ್ರಮದಡಿ ಕಾರ್ಯನಿರ್ವಹಿಸುವುದರಿಂದ ಆ ಶಾಲೆಗಳ ರಜೆಯ ದಿನಾಂಕ ಹಾಗೂ ರಜೆಯ ಅವಧಿ ಬೇರೆಯಾಗಿರುತ್ತದೆ.

ಅಕ್ಟೋಬರ್ 3ರಿಂದ 20ರ ತನಕ ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ದಸರಾ ರಜೆ ಇದ್ದು,  ಅಕ್ಟೋಬ‌ರ್ 21 ರಿಂದ ಶೈಕ್ಷಣಿಕ ಸಾಲಿನ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ.

Advertisement

ದಸರಾಕ್ಕಾಗಿ ಅ.3 ರಿಂದ 20ರ ವರೆಗೆ ದಸರಾ ರಜೆಯನ್ನು ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ.ಎಸ್ಎಸ್ಎಲ್ಸಿ ಅರ್ಧ ವಾರ್ಷಿಕ ಪರೀಕ್ಷೆ ಅ.1 ಕ್ಕೆ ಮುಕ್ತಾಯವಾಗಲಿದೆ. ಅ.2 ಗಾಂಧಿ ಜಯಂತಿ ಮುಗಿಯುತ್ತಿದ್ದಂತೆ ದಸರಾ ರಜೆ ಆರಂಭಗೊಳ್ಳಲಿದೆ.

ಮಂಗಳೂರಿನಲ್ಲೂ ಇದೇ ದಿನಾಂಕಗಳಂದು ರಜೆ ನೀಡಲಾಗಿದೆ. ಈ ಹಿಂದೆ ಮಂಗಳೂರು, ಉಡುಪಿ ಪ್ರಾಂತ್ಯದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಸ್ವಲ್ಪ ಮಾರ್ಪಾಡು ಆಗುತ್ತಿತ್ತು. ಉಳಿದೆಡೆಗೆ ಕೊಡಲಾಗುವ ರಜೆಗೆ ಹೋಲಿಸಿದರೆ ಮಂಗಳೂರಿನಲ್ಲಿ ದಸರಾ ರಜೆ ವ್ಯತ್ಯಾಸವಾಗುತ್ತಿತ್ತು. ಆದರೆ, ಈ ಬಾರಿ ಅಂಥ ಯಾವುದೇ ಬದಲಾವಣೆ ಆಗಿಲ್ಲ. ಕರ್ನಾಟಕದ ಎಲ್ಲಾ ಶಾಲೆಗಳಿಗೆ ಒಂದೇ ರೀತಿ, ಒಂದೇ ಅವಧಿಯ ರಜೆಯನ್ನು ನೀಡಲಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement