ಬೆಂಗಳೂರು : ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪೊಲೀಸರು ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿದ್ದು, ಕೊಲೆ ಮಾಡಿದಾತ ಒಡಿಶಾದಲ್ಲಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪೊಲೀಸರು ಇನ್ನೇನು ಆತನನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಶಂಕಿತ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಆರೋಪಿ.
ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಶಂಕಿತ ಆರೋಪಿ ಮುಕ್ತಿ ರಂಜನ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈಗಾಗಲೇ ಬೆಂಗಳೂರು ಪೊಲೀಸರು ವಿಚಾರಣೆಗೆಂದು ಒಡಿಶಾಗೆ ತೆರಳಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಸಾಕಷ್ಟು ಮಂದಿಯ ಮೇಲೆ ಅನುಮಾನ ಉಂಟಾಗಿತ್ತು. ಆದರೆ ಸತತ ತನಿಖೆಯ ಬಳಿಕ ಕೊಲೆಗಾರನ ಸುಳಿವು ಪೊಲೀಸರಿಗೆ ಪತ್ತೆಯಾಗಿತ್ತು.
ಮುಕ್ತಿ ರಂಜನ್ ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ಟೀಂ ಹೆಡ್ ಆಗಿದ್ದ. ಮಹಾಲಕ್ಷ್ಮೀ ಹಾಗೂ ಮುಕ್ತಿ ರಂಜನ್ ನಡುವೆ ಬಹಳ ಸಲುಗೆ ಬೆಳೆದಿತ್ತು. ಸೆ.1ರಂದು ಕೆಲಕ್ಕೆ ಬಂದಿದ್ದ ಮಹಾಲಕ್ಷ್ಮೀ ಮಾರನೇ ದಿನ ವೀಕ್ಲಿ ಆಫ್ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಮುಕ್ತಿ ರಂಜನ್ ಕೂಡ ವೀಕ್ಲಿ ಆಫ್ ತೆಗೆದುಕೊಂಡಿದ್ದನು.
ಇನ್ನು ವೀಕ್ಲಿ ಆಫ್ ತೆಗೆದುಕೊಂಡಿದ್ದ ಮಹಾಲಕ್ಷ್ಮೀ ತನ್ನ ತಾಯಿಗೆ ಫೋನ್ ಮಾಡಿ ಮನೆಗೆ ಬರ್ತೀನಿ ಎಂದು ಹೇಳಿದ್ದಳು. ಬಳಿಕ ಮುಕ್ತಿ ರಂಜನ್ ರಾಯ್ ತನ್ನ ಗೆಳತಿ ಮಹಾಲಕ್ಷ್ಮೀಯನ್ನ ಬರ್ಬರವಾಗಿ ಕೊಲೆ ಮಾಡಿದ್ದು, ಮೃತದೇಹವನ್ನ 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ, ಫ್ರೀಡ್ಜ್ಗೆ ತುಂಬಿಸಿಟ್ಟು ತನ್ನೂರಿಗೆ ಪರಾರಿಯಾಗಿದ್ದ.