ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು SKSSF ವಿಖಾಯ ಕಾರ್ಯಕರ್ತರಾದ ಅಝರ್ ಮತ್ತು ಜಮಾಲ್ ರವರ ಮೇಲೆ ಸಲಫಿ ನಾಯಕ ಇಬ್ರಾಹಿಂ ಖಲೀಲ್ ಸಮಹಾದಿ ಎಂಬವರು ಉಗ್ರವಾದ ಭಯೋತ್ಪಾದನೆ ಆರೋಪ ಹೊರಿಸಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಪೋಸ್ಟ್ ಹಲವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಇಬ್ರಾಹಿಂ ಖಲೀಲ್ ಸಮಹಾದಿ ತನ್ನ ಫೇಸ್ಬುಕ್ ಖಾತೆಯಲ್ಲಿ ‘ಪ್ರವೀಣ್ ನೆಟ್ಟಾರು ಕೊಲೆ ಮಾಡಲು ಮೊತ್ತ ಮೊದಲು ಬೆಳ್ಳಾರೆ ಝಕರಿಯಾ ಮಸ್ಜಿದ್ ವಠಾರದಲ್ಲಿ ಮೊತ್ತ ಮೊದಲು ಮಾತನ್ನು ಆರಂಭಿಸಿದವರೇ ಈ ಇಬ್ಬರಾದ Jamalks Bellare ಮತ್ತು Azaruddin bellare. ಇದನ್ನು ನಾನು ಎಲ್ಲಿ ಬೇಕಾದ್ರೂ ಹೇಳಲು ತಯಾರಾಗಿದ್ದೇನೆ. ಮತ್ತು ಇವತ್ತು ಬೆಳಗ್ಗೆ TV. 9 ಮಂಗಳೂರು ರಿಪೋರ್ಟರ್ ಕಾಲ್ ಮಾಡಿದ್ರು, ಅವರಲ್ಲಿ ನಡೆದ ಘಟನೆ ಹೇಳಿರುತ್ತೇನೆ. ಅವರಲ್ಲಿ ಕೂಡ ಸತ್ಯ ಹೇಳಿರುತ್ತೇನೆ. ಸತ್ಯ ಹೇಳಲು ಎಲ್ಲಿ ಕೂಡ ಭಯಪಡಬೇಕಾಗಿ ಬರುವುದಿಲ್ಲ. ಈ ಇಬ್ಬರನ್ನು ಮತ್ತು ಮಸ್ಜಿದ್ ಅಧ್ಯಕ್ಷರು ಮಂಗಳ ವಾ ಇಲ್ಲ ಸುಮಂಗಲವಾ.. ಯಾರೇ ಆಗಲಿ ಕೋರ್ಟ್ ಹತ್ತಿಸಿ ಹೇ ತೀರುವೆನು..ಬೆಳ್ಳಾರೆಯಾ ಕೇಂದ್ರ ಮಸ್ಜಿದ್ ನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಇದನ್ನು ನಾವೆಲ್ಲರೂ ಸೇರಿ ಚಿಗುರಲು ಬಿಡಬಾರದು. ಮೊಳೆಯಲ್ಲೇ ಚಿವುಟಿ ಹಾಕಬೇಕು..’ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.