ಬೇಕಾಗುವ ಪದಾರ್ಥಗಳು…
- ಚಿಕನ್ -ಅರ್ಧ ಕೆಜಿ
- ಕ್ಯಾಪ್ಸಿಕಂ -2
- ಈರುಳ್ಳಿ -2
- ಟೊಮೆಟೊ -2
- ಶುಂಠಿ – ಬೆಳ್ಳುಳ್ಳಿ ಪೇಸ್ಟ್-ಸ್ವಲ್ಪ
- ಅರಿಶಿನ ಪುಡಿ -ಒಂದು ಚಮಚ
- ಖಾರದಪುಡಿ– ಒಂದು ಚಮಚ
- ಕಾಳು ಮೆಣಸಿನ ಪುಡಿ –ಒಂದು ಚಮಚ
- ಗರಂ ಮಸಾಲ –ಒಂದು ಚಮಚ
- ನಿಂಬೆ ಹಣ್ಣಿನ ರಸ -ಒಂದು ಚಮಚ
- ಪುದೀನ -ಒಂದು ಬಟ್ಟಲು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಒಂದು ಪಾತ್ರೆಗೆ ಚಿಕನ್ ಹಾಕಿಕೊಂಡು ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ.
- ಪಕ್ಕದಲ್ಲಿ ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಐದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮೊಟೊ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ಇದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಚಿಕನ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಜತೆಗೆ ಕಾಳು ಮೆಣಸಿನ ಪುಡಿ, ಗರಂ ಮಸಾಲ ಹೆಚ್ಚಿದ ಪುದಿನ, ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 10 ನಿಮಿಷ ಒಲೆಯ ಮೇಲೆ ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅಲಂಕರಿಸಿದರೆ ರುಚಿಕರವಾದ ಕ್ಯಾಪ್ಸಿಕಂ ಚಿಕನ್ ಫ್ರೈ ಸವಿಯಲು ಸಿದ್ಧ.