ನವದೆಹಲಿ :ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ವಾಯು ಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿರುವ ಅಮರ್ ಪ್ರೀತ್ ಸಿಂಗ್ ಈ ಹಿಂದೆ ವಾಯುಪಡೆಯ ವೈಸ್ ಚೀಫ್ ಆಫ್ ದಿ ಏರ್ ಸ್ಟಾಫ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ನಿವೃತ್ತರಾಗಿದ್ದು, ವಾಯುಪಡೆ ನೂತನ ಮುಖ್ಯಸ್ಥರಾಗಿ ಎಪಿ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ.