ಶ್ರೀಗಂಧದ ಪುಡಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಮುಖವನ್ನು ವಾಶ್ ಮಾಡಿ. ಇದು ಮುಖದ ಚರ್ಮವನ್ನು ತಂಪಾಗಿಸುತ್ತದೆ. ಮುಖದಲ್ಲಿರುವ ಗುಳ್ಳೆಗಳನ್ನು ನಿವಾರಿಸಲು 1 ಚಮಚ ಶ್ರೀಗಂಧದ ಪುಡಿ ಮತ್ತು 1 ಚಮಚ ಅಕ್ಕಿಹಿಟ್ಟನ್ನು ಹಾಲಿಗೆ ಬೆರೆಸಿಮುಖಕ್ಕೆ ಹಚ್ಚಿ. ಇದು ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ.
ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಮುಖದಲ್ಲಿ ಬೆವರು, ಗುಳ್ಳೆಗಳ ಸಮಸ್ಯೆ ಅಧಿಕವಾಗಿ ಮುಖದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಗಳನ್ನು ಬಳಸಿ. 2 ಚಮಚ ಅಲೋವೆರಾ, 1 ಚಮಚ ರೋಸ್ ವಾಟರ್ ಮತ್ತು 1 ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ.