ಖ್ಯಾತ ನಟ & ಶಿವಸೇನೆ ನಾಯಕ ಗೋವಿಂದ ಅವರ ಸ್ವಂತ ರಿವಾಲ್ವರ್‌ನಿಂದ ಮಿಸ್‌ಫೈರಿಂಗ್ ಆಗಿ ಅವರ ಕಾಲಿಗೆ ಗುಂಡು ತಗುಲಿದೆ.
ಗೋವಿಂದ ಅವರು ಇಂದು ಮುಂಜಾನೆ 5 ಗಂಟೆಗೆ ಕೊಲ್ಕೊತ್ತಾಗೆ ಹೊರಡುತ್ತಿದ್ದ ವೇಳೆ ತಮ್ಮ ರಿವಾಲ್ವಾರ್‌ನ್ನು ಕೇಸ್‌ನಲ್ಲಿ ಇಡುವಾಗ ಅದು ಕೆಳಗೆ ಬಿದ್ದು ಗುಂಡು ಸಿಡಿದಿದೆ.
ಕೂಡಲೇ ಅಂಧೇರಿಯ ಕಿರಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಕಾಲಿನಿಂದ ಗುಂಡು ಹೊರತೆಗೆದಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗೋವಿಂದ ಅವರ ಮ್ಯಾನೇಜರ್ ತಿಳಿಸಿದ್ದಾರೆ.
ಅತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗನ್ ವಶಪಡಿಸಿಕೊಂಡಿದ್ದಾರೆ.