ಈ ಪಾನೀಯಗಳನ್ನು ಕುಡಿದರೆ ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು ಇರುವುದೇ ಇಲ್ಲ..!

ಸಕ್ಕರೆ ಕಾಯಿಲೆ ಬಂದಮೇಲೆ ನಮ್ಮೆಲ್ಲಾ ಇಷ್ಟದ ಆಹಾರಗಳನ್ನು ಕಂಟ್ರೋಲ್‌ನಲ್ಲಿ ಇಡ ಬೇಕಾಗುತ್ತದೆ. ಸರಿಯಾದ ಆಹಾರ ಪದ್ಧತಿ, ವೈದರ ಔಷಧಿ, ಉತ್ತಮ ಜೀವನಶೈಲಿಯ ಜೊತೆಗೆ ಆಯುರ್ವೇದದಲ್ಲಿ ಕೆಲವೊಂದು ಪಾನೀಯಗಳನ್ನು ಸೇವಿಸುವುದರಿಂದ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದ್ದರವರು ತಾವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಒಂದು ಮಾತಿದೆ ಈ ಕಾಯಿಲೆ ಇರುವವರು ಒಂದು ತಿಂದರೆ ಕಡಿಮೆ ಆಗುತ್ತದೆ, ಎರಡು ತಿಂದರೆ ಜಾಸ್ತಿ ಆಗುತ್ತದೆ! ಹೌದು ಕೆಲವೊಂದು ಆಹಾರ ಪದಾರ್ಥಗಳಲ್ಲಿ ಇವರ ಮಿತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ, ಇನ್ನು ಕೆಲವೊಂದು ಆಹಾರ ಪದಾರ್ಥ ಗಳನ್ನು ಇವರು ಸಂಪೂರ್ಣವಾಗಿ ಬಿಟ್ಟು ಬಿಡಬೇಕಾಗಿ ಬರುತ್ತದೆ. ಇನ್ನು ತಜ್ಞರೇ ಹೇಳುವ ಪ್ರಕಾರ, ಈ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವಂತಹ ಒಂದು ಮಾರಕ ಆರೋಗ್ಯ ಸಮಸ್ಯೆ. ದೀರ್ಘಾವಧಿಯವರೆಗೆ ಕಾಡುವ ಈ ಕಾಯಿಲೆಯನ್ನು ಸಂಪೂ ರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ! ಹೀಗಾಗಿ ವ್ಯಕ್ತಿಯಲ್ಲಿ ಒಮ್ಮೆ ಈ ಕಾಯಿಲೆ ಕಾಣಿಸಿ ಕೊಂಡರೆ, ಜೀವನಪರ್ಯಾಂತ, ಇದರಿಂದಾಗುವ ಸಮಸ್ಯೆಯನ್ನು ಆತ ಅನುಭವಿಸಬೇಕಾಗುತ್ತದೆ.

ಹೀಗಾಗಿ ಈ ಕಾಯಿಲ ನಮ್ಮನ್ನು ಆವರಿಸುವ ಮುನ್ನವೇ ಸರಿಯಾದ ಆಹಾರ ಪದ್ಧತಿ ಗಳನ್ನು ಹಾಗೂ ಒಳ್ಳೆಯ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ ಈ ಕಾಯಿಲೆ ಯಿಂದ ದೂರವಿರಬಹುದು. ಈ ಮಧ್ಯೆ ಒಂದು ಶುಭ ಸುದ್ದಿ ಎಂದರೆ ಸಕ್ಕರೆಕಾಯಿಲೆಯನ್ನ ನಿರ್ವಹಣೆ ಮಾಡುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವಂತೂ ಇಲ್ಲವೇ ಇಲ್ಲ! ಕೆಲವೊಂದು ಸರಳ ಮನೆಮದ್ದುಗಳನ್ನು ಅನುಸರಿ ಸುವುದರ ಮೂಲಕ ಈ ಕಾಯಿಲೆಯ ನಿರ್ವಹಣೆ ಬಹಳ ಸುಲಭ. ಒಂದು ವೇಳೆ ನಿಮಗೂ ಕೂಡ ಸಕ್ಕರೆಕಾಯಿಲೆ ಇದ್ದರೆ, ವೈದ್ಯರು ನೀಡಿರುವ ಔಷಧಿಗಳನ್ನು ಸರಿಯಾಗಿ ಅನುಸರಿಸುವುದರ ಜೊತೆಗೆ, ಇಲ್ಲಿ ನೀಡಿರುವ ಕೆಲವೊಂದು ಸಿಂಪಲ್ ಮನೆಮದ್ದುಗಳನ್ನು ಅನುಸರಿಸಿ ನೋಡಿ… ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ಈ ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಕಂಡು ಬರುವುದರಿಂದ, ಇದನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಕೂಡ ಔಷಧಿ ಯಾಗಿ ಇದನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ.

Advertisement

ಇನ್ನು ವಿಶೇಷವಾಗಿ ಸಕ್ಕರೆಕಾಯಿಲೆ ಇರುವವರಿಗೆ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ಸಮತೋಲನಗೊಳಿಸಿ ಇನ್ಸುಲಿನ್ ಪ್ರತಿರೋಧಕ್ಕೆ ಸಹಾಯ ಮಾಡುತ್ತದೆ. ಎರಡು ಟೇಬಲ್ ಚಮಚ ಆಗುವಷ್ಟು ನೆಲ್ಲಿಕಾಯಿ ರಸಕ್ಕೆ, ಸ್ವಲ್ಪ ದಾಲ್ಚಿನ್ನಿ ಪುಡಿ, ಒಂದೆರಡು ಕರಿಬೇವಿನ ಸೊಪ್ಪು ಮಿಕ್ಸ್ ಮಾಡಿ, ಇದಕ್ಕೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಈ ಪಾನೀಯವನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಉಪ್ಪು ಹಾಗೂ ಸಕ್ಕರೆಯನ್ನು ಈ ಪಾನೀಯಕ್ಕೆ ಸೇರಿಸಬೇಡಿ. ಮೆಂತೆಕಾಳುಗಳ ಪುಡಿ… ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತ ಎಂದು ಹೆಸರು ಪಡೆದಿರುವ ಈ ಮೆಂತ್ಯಕಾಳುಗಳು, ಕಹಿಯಾಗಿದ್ದರೂ, ಆರೋಗ್ಯದ ವಿಷ್ಯದಲ್ಲಿ ಮಾತ್ರ ಎತ್ತಿದಕೈ! ಈ ಪುಟ್ಟ ಕಾಳಿನಲ್ಲಿ ಕರಗುವಂತಹ ನಾರಿನಾಂ ಶವಿದ್ದು, ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಂತಹ ಗುಣಲಕ್ಷಣಗಳು ಕೂಡ ಅಧಿಕ ಪ್ರಮಾಣ ದಲ್ಲಿ ಕಂಡುಬರುತ್ತದೆ.

ಅದೇ ರೀತಿಯಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವ ಎಲ್ಲಾ ಆರೋಗ್ಯಕಾರಿ ಅಂಶಗಳು ಇದರಲ್ಲಿ ಕಂಡು ಬರುತ್ತದೆ. ಇದಕ್ಕೆ ನೀವು ಮಾಡಬೇಕಾದುದಿಷ್ಟೆ- ಪ್ರತಿದಿನ, ಒಂದು ಲೋಟ ಬಿಸಿ ನೀರಿಗೆ, ಒಂದು ಟೀ ಚಮಚ ದಷ್ಟು ಮೆಂತೆಕಾಳುಗಳ ಪುಡಿ ಯನ್ನು ಹಾಕಿ ಚೆನ್ನಾಗಿ ಕದಡಿ, ಖಾಲಿಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವೆಂದರೆ ಇಡೀ ರಾತ್ರಿ ಸ್ವಲ್ಪ ಮೆಂತೆಕಾಳುಗಳನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಸೇವಿಸಿ, ಇದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ, ಕ್ರಮೇಣವಾಗಿ ಮಧುಮೇಹ ಸಮಸ್ಯೆ ಕೂಡ ನಿಯಂತ್ರಣಕ್ಕ ಬರುತ್ತದೆ. ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ನಮಗೆಲ್ಲಾ ಗೊತ್ತೇ ಇರುವ ಹಾಗೆ ಸಾವಿರಾರು ವರ್ಷಗಳ ಇತಿಹಾಸ ಇರುವ ಈ ತಾಮ್ರದ ಪಾತ್ರೆಗಳುಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಅಡಗಿದೆ. ಅದರಲ್ಲೂ ಈ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಾ ಬಂದರೆ, ಹಲವಾರು ರೀತಿಯ ಆರೋಗ್ಯ ಸಮಸ್ಯೆಯನ್ನು ನಿವಾರಿಸಿ ಕೊಳ್ಳಬಹುದು.

ಹೀಗಾಗಿ ರಾತ್ರಿ ಮಲಗುವ ಮುನ್ನ ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರನ್ನು ತುಂಬಿ, ಇಡೀ ರಾತ್ರಿ ಹಾಗೇ ಬಿಟ್ಟು, ಮರುದಿನ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ, ಮನುಷ್ಯನ ಆರೋಗ್ಯದಲ್ಲಿ ಧನಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದು ಮಧುಮೇಹದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಹಾಗಲಕಾಯಿ ಜ್ಯೂಸ್ ಕಹಿತರಕಾರಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಈ ತರಕಾರಿ, ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕಾಗಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿಅರ್ಧ ಸಣ್ಣ ಲೋಟ ಹಾಗಲಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲಾಂದರೆ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಹಾಗಲಕಾಯಿ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಬೆಳಗಿನ ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಇದ ರಿಂದ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳು ಉಂಟಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement