ಭೋಪಾಲ್: ಸುಂದರ ಮಗುವಿಗಾಗಿ ಮಹಿಳೆಯೊಬ್ಬರು ತನ್ನ ಪತಿಯ ಸಹೋದರನೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರಸಂಗವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ‘ನಿನ್ನ ಸಹೋದರ ಹೆಚ್ಚು ಸುಂದರವಾಗಿರುವುದರಿಂದ ಅವನತ್ತ ಆಕರ್ಷಿತನಾಗಿರುವೆ ಮತ್ತು ನನಗೆ ಒಳ್ಳೆಯ ಮಗು ಬೇಕು’ ಎಂದು ಮಹಿಳೆಯು ತನ್ನ ಪತಿಗೆ ಹೇಳಿದ್ದಾಳೆ. ಈ ಸಂಬಂಧ ಆಕೆಯ ಪತಿ ಛತ್ತರ್‌ಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನನಗೆ ಯಾವುದೇ ಅನಾಹುತ ಸಂಭವಿಸಿದರೆ ಅಥವಾ ತೊಂದರೆ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಓಡಿಹೋದ ನಂತರ ಮಹಿಳೆಯು ತನ್ನ ಪತಿ ಮತ್ತು ಅತ್ತೆಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ.
