ಬೆಂಗಳೂರು : ಈ ಬಾರಿ ನವರಾತ್ರಿಗೆ ಆಕಾಶದಲ್ಲಿ ಅಪರೂಪದ ಅತಿಥಿಯ ದರ್ಶನವಾಗಲಿದೆ. ಅಪರೂಪದ ಧೂಮಕೇತು ಒಂದು ಬರಿಯ ಕಣ್ಣಿಗೆ ಕಾಣ ಸಿಗಲಿದೆ.
ಒಂದು ಧೂಳು ಹಾಗೂ ಹಿಮಕಲ್ಲಿನ ಉಂಡೆಯು ಸೌರಮಂಡಲದ ಅಂಚಿನಿಂದ ಹೊರಟಿತ್ತು. ಹಿಂದಿನ ವರ್ಷ ಚೀನಾದಲ್ಲಿ ಖಗೋಳಶಾಸ್ತ್ರಜ್ಞರು ಇದನ್ನು ಗುರುತಿಸಿದ್ದರು. ಈ ಧೂಮಕೇತು ಸೂರ್ಯನ ಸುತ್ತ ಒಂದು ಸುದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತದೆ. ಈ ಧೂಮಕೇತು ಅಕ್ಟೋಬರ್ 12 ರಂದು ಸುಮಾರು 70,67,200 ಕಿ.ಮೀ ದೂರದಲ್ಲಿ ಹಾದು ಹೋಗಲಿದೆ. ಪ್ರಕಾಶಮಾನವಾಗಿ ಗೋಚರಿಸಲಿದೆ. ಬರಿಯ ಕಣ್ಣಿನಲ್ಲಿ ಇದನ್ನು ನೋಡಲು ಸಾಧ್ಯ. ಮೊದಲ ಅವಕಾಶ ತಪ್ಪಿದರೆ ಅಕ್ಟೋಬರ್ 15ರಿಂದ 30ರವರೆಗೆ ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ ಗುರುತಿಸಬಹುದಾಗಿದೆ.