ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಮತ್ತು ಇಡಿ ತನಿಖೆ ಬಿಸಿ ತಟ್ಟಿದ ಬೆನ್ನಲ್ಲೇ ರಾಜ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಆಗಮಿಸುತ್ತಿದ್ದಾರೆ. ಇದೇ ತಿಂಗಳು 15ಕ್ಕೆ ಬೆಂಗಳೂರಿಗೆ ಕಾಂಗ್ರೆಸ್ ಹೈಕಮಾಂಡ್ನಿಂದ ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಬರ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ಮುಂದುವರೆಸಿರುವ ಬೆನ್ನಲ್ಲೇ ಪಕ್ಷದ ಒಳಗೊಳಗೆ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ, ಕೆಲ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸುತ್ತಿದ್ದಾರೆ.
ಕೆಲವರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷರನ್ನ ಭೇಟಿಯಾಗಿ ಬರ್ತಿದ್ದಾರೆ. ಇನ್ನೂ ಪಕ್ಷದ ಕೆಲ ಹಿಂದುಳಿದ ವರ್ಗಗಳ ಮುಖಂಡರುಗಳು ಸಮುದಾಯವಾರು ಸಭೆ ಸೇರಿ ಚರ್ಚೆಗಳು ನಡೆಸುತ್ತಿರೋದ್ರಿಂದ ಪಕ್ಷದಲ್ಲಿ ಕೆಲ ಗೊಂದಲಗಳು ಸಹ ಉಂಟಾಗುತ್ತಿದ್ದೆ. ಈ ಹಿನ್ನೆಲೆಯಲ್ಲಿ ಖುದ್ದು ರಾಜ್ಯಕ್ಕೆ ಕೆಸಿ ವೇಣುಗೋಪಾಲ್ ಭೇಟಿ ನೀಡ್ತಿದ್ದಾರೆ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಸೇರಿದಂತೆ ಹಿರಿಯ ಸಚಿವರ ಜೊತೆ ವೇಣುಗೋಪಾಲ್ ಸಮಾಲೋಚನೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ಕಾನೂನು ಹೋರಾಟದ ರೂಪುರೇಷಗಳು, ಒಂದು ವೇಳೆ ಸಿದ್ದರಾಮಯ್ಯ ಕಾನೂನು ಹೋರಾಟ ತೀರಾ ವಿಕೋಪಕ್ಕೆ ಹೋದರೆ ಮುಂದಿನ ಪಕ್ಷದ ನಡೆಯ ಬಗ್ಗೆ ರಾಜ್ಯ ನಾಯಕರ ಜೊತೆ ಕೆಸಿ ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ. ರಾಜ್ಯದ ನಾಯಕರ ಜೊತೆ ಚರ್ಚೆಯ ಬಳಿಕೆ ರಾಜ್ಯ ಪ್ರಸ್ತುತ ವರದಿಯನ್ನ ಎಐಸಿಸಿ ವರಿಷ್ಠರಿಗೆ ವೇಣುಗೋಪಾಲ್ ತಲುಪಿಸಲಿದ್ದಾರೆ.