ಬಡತನವನ್ನ ಮೆಟ್ಟಿ ನಿಂತು ವೈದ್ಯೆಯಾದ ಪಿಂಕಿ ಹರ್ಯಾನ್

ಹಿಮಾಚಲ ಪ್ರದೇಶ : ಬಡತನ ಜೀವನಕ್ಕೆ ಹೊರತು ಕಲಿಕೆಗಲ್ಲ ಎಂಬುವುದಕ್ಕೆ ತನ್ನ ಕಷ್ಟಗಳನ್ನ ಮೆಟ್ಟಿ ನಿಂತು ಸಾಧನೆಗೈದಿರುವ ಡಾಕ್ಟರ್ ಪಿಂಕಿ ಹರ್ಯಾನ್ ಅವರ ಯಶೋಗಾಥೆ ಇದು.

ಪಿಂಕಿ ಹರ್ಯಾನ್ ಅವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮೆಕ್ಲಿಯೋಡ್‌ಗಂಜ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದವರು. ಪಿಂಕಿ ಅವರು ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಯಲ್ಲಿ ತಿಂದು ಬಿಸಾಕಿದ ಹಳಸಿದ ಆಹಾರ ತಿಂದು ಬದುಕುತ್ತಿದ್ದವರು.

ಈ ವೇಳೆ ಪಿಂಕಿ ಅವರನ್ನು ಗಮನಿಸಿದ ಹಿಮಾಚಲ ಪ್ರದೇಶದ ಧರ್ಮಶಾಲಾ ಮೂಲದ ದತ್ತಿ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಟಿಬೆಟ್ ಸನ್ಯಾಸಿ ಲೊಬ್ಸೆಂಗ್ ಜಮ್ಯಾಂಗ್ ಅವರು ವಿದ್ಯಾಭ್ಯಾಸ ನೀಡಲು ನಿರ್ಧರಿಸುತ್ತಾರೆ. ಬಳಿಕ ಪಿಂಕಿ ಅವರನ್ನು ನಿರಾಶ್ರಿತರ ಶಿಬಿರಕ್ಕೆ ಸೇರಿಸುವಂತೆ ಲೊಬ್ಸೆಂಗ್ ಜಮ್ಯಾಂಗ್ ಆಕೆಯ ಪೋಷಕರಲ್ಲಿ ಕೇಳಿಕೊಂಡಿದ್ದರು. ಆದರೆ ಆಕೆಯ ತಂದೆ ಕಾಶ್ಮೀರಿ ಲಾಲ್‌ರ ಮನವೊಲಿಸುವುದು ಸುಲಭವಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ಕೊನೆಗೂ ಆಕೆಗೆ ಶಿಕ್ಷಣ ಕೊಡಿಸಲು ಪಿಂಕಿ ಅವರ ತಂದೆ ಒಪ್ಪುತ್ತಾರೆ.

Advertisement

ನಿರಾಶ್ರಿತರ ಶಿಬಿರಕ್ಕೆ ಸೇರಿದ ಪಿಂಕಿ ಅವರು ಅಧ್ಯಯನದಲ್ಲಿ ಸದಾ ಮುಂದಿರುತ್ತಿದ್ದರು. ಪಿಯುಸಿ ಪೂರ್ಣಗೊಳಿಸಿದ ನಂತರ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಭೇದಿಸುತ್ತಾರೆ. 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದು ಈಗ ಎಂಬಿಬಿಎಸ್ ಪದವಿ ಪಡೆದಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement