ವಿಜಯಪುರ : ಸಿಎಂ ರಾಜೀನಾಮೆ ನೀಡಬೇಕು ಎಂದು ನಮ್ಮ ಹೈಕಮಾಂಡ್ ಹೇಳಬೇಕು, ಇವ್ರು ಯಾರು ಹೇಳೋಕೆ ಕಾಂಗ್ರೆಸ್ ಹೈಕಮಾಂಡಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ವಿಜಯೇಂದ್ರ ಹೇಳಿದ್ದಾರೆ. ನಿವೇನು ಕಾಂಗ್ರೆಸ್ ಹೈಕಮಾಂಡಾ? ನೀವು ಬಿಜೆಪಿ ಪಕ್ಷದ ಅಧ್ಯಕ್ಷರು. ನೀವು ಹೇಳಿದಾಗ ರಾಜೀನಾಮೆ ನೀಡೋಕೆ ಆಗುತ್ತಾ? ಎಂದು ಕಿಡಿ ಕಾರಿದ್ದಾರೆ.
ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗೆ ಇದೆ. ಇದನ್ನು ನಮ್ಮ ಹೈಕಮಾಂಡ್ ಹೇಳಬೇಕು. ಇವ್ರು ಯಾರು ಹೇಳೋಕೆ? ನಮ್ಮ ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು? ನೂರಕ್ಕೆ ನೂರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.