ನವರಾತ್ರಿ ಏಳು ದಿನಗಳ ಉಪವಾಸದ ವೇಳೆ ಕೆಲವು ಪದಾರ್ಥಗಳನ್ನು ಮಾತ್ರ ಸೇವನೆ ಮಾಡುವುದರಿಂದ ಮಲಬದ್ಧತೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ನವರಾತ್ರಿ ಉಪವಾಸದ ನಿಯಮಗಳೇನು? ಈ ಸಮಯದಲ್ಲಿ ಎಲ್ಲಾ ತರಹದ ಆಹಾರ ತಿನ್ನಲು ಸಾಧ್ಯವಿಲ್ಲ. ಮತ್ತು ನಿಮ್ಮ ದೇಹವು ಸಾಕಷ್ಟು ಫೈಬರ್ ಅನ್ನು ಪಡೆಯಲು ಸಾಧ್ಯ ಆಗಲ್ಲ.
ನವರಾತ್ರಿ ಸಮಯದಲ್ಲಿ ಆಹಾರ ಮತ್ತು ಜೀವನಶೈಲಿ ಬದಲಾವಣೆಗಳು ಮಲಬದ್ಧತೆಗೆ ಕಾರಣವಾಗುತ್ತವೆ. ಹೀಗಾಗಿ ಈ ದಿನಗಳಲ್ಲಿ ನೀವು ಆರೋಗ್ಯ ಆಗಿರಲು ಕೆಲವು ನಿಯಮ ಪಾಲಿಸಬೇಕು. ಶಿಖಾ ಅಗರ್ವಾಲ್ ಶರ್ಮಾ ಪ್ರಕಾರ, ನವರಾತ್ರಿಯಲ್ಲಿ ದೀರ್ಘಾವಧಿ ಉಪವಾಸವು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಆದರೆ ಆಹಾರದಲ್ಲಿನ ಬದಲಾವಣೆ ಆಮ್ಲೀಯತೆ ಮತ್ತು ಮಲಬದ್ಧತೆ ಸಮಸ್ಯೆಗೆ ಕಾರಣವಾಗಬಹುದು. ಮಲಬದ್ಧತೆ ತಪ್ಪಿಸಲು ಕೆಳಗೆ ತಿಳಿಸಲಾದ ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸಿ.
ಉಪವಾಸದ ವೇಳೆ ಮಲಬದ್ಧತೆಗೆ ಕಾರಣಗಳು
ಮಲಬದ್ಧತೆಗೆ ಕಾರಣಗಳು ಫೈಬರ್ ಕೊರತೆ ಮತ್ತು ಕಡಿಮೆ ದ್ರವ ಪದಾರ್ಥ ಸೇವನೆ, ಚಹಾ ಅಥವಾ ಕಾಫಿಯ ಹೆಚ್ಚಿನ ಸೇವನೆ, ತಡರಾತ್ರಿಯಲ್ಲಿ ಎಚ್ಚರ, ದೀರ್ಘಾವಧಿಯ ಉಪವಾಸ. ಈ ಅಭ್ಯಾಸಗಳು ಮಲಬದ್ಧತೆ ಸಾಧ್ಯತೆ ಮಾತ್ರವಲ್ಲದೆ ಆಮ್ಲೀಯತೆ ಮತ್ತು ಅನಿಲ ಹೆಚ್ಚಿಸುತ್ತವೆ.
ಹಣ್ಣುಗಳ ಸೇವನೆ
ನಿಮ್ಮ ಆಹಾರದಲ್ಲಿ ಪಪ್ಪಾಯಿ, ಪೇರಲ, ಪೇರಳೆ ಮತ್ತು ಅಂಜೂರ ಹಣ್ಣುಗಳನ್ನು ಸೇರಿಸಿ. ಅವುಗಳು ಹೆಚ್ಚಿನ ಫೈಬರ್ ಮತ್ತು ವಿಟಮಿನ್ಗಳನ್ನು ಹೊಂದಿವೆ. ಕಲ್ಲಂಗಡಿ, ಕಿತ್ತಳೆ ಮತ್ತು ದ್ರಾಕ್ಷಿಯಂತಹ ನೀರಿನ ಅಂಶವಿರುವ ಹಣ್ಣುಗಳು ಹೈಡ್ರೀಕರಿಸುತ್ತವೆ. ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.
ಫೈಬರ್ ಗಾಗಿ ಈ ವಸ್ತುಗಳ ಸೇವನೆ ಮಾಡಿ
ಈ ದಿನಗಳಲ್ಲಿ ನಿಮ್ಮ ಫೈಬರ್ ಸೇವನೆ ಹೆಚ್ಚಿಸಿ. ರಾಜಗಿರಿ ಹಿಟ್ಟು, ಹುರುಳಿ ಹಿಟ್ಟು, ಸಾಮಕ್ ಅಕ್ಕಿ, ಮಖಾನದಂತಹ ಆಹಾರ ಪದಾರ್ಥಗಳು ಸಾಕಷ್ಟು ಫೈಬರ್ ಒದಗಿಸುತ್ತವೆ. ನೀರಿನಲ್ಲಿ ಬೇಯಿಸಿದ ಓಟ್ಸ್ ಕೂಡ ಫೈಬರ್ನಲ್ಲಿ ಸಮೃದ್ಧವಾಗಿದೆ. ಸಾಬುದಾನ ಖಿಚಡಿ ಸೇವಿಸಿ ಅದು ಶಕ್ತಿ ನೀಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ನೀವು ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕಡ್ಡಾಯವಾಗಿ ಕುಡಿಯಬೇಕು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸೋಡಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಉಂಟಾಗುವ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆ ತಡೆಯುತ್ತದೆ. ನಿಂಬೆ ಪಾನಕ, ತೆಂಗಿನ ನೀರು ಮತ್ತು ಮಜ್ಜಿಗೆ ಕೂಡ ಸೇವಿಸಬಹುದು ಆದರೆ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಆಹಾರದಲ್ಲಿ ಮೊಸರು ಸೇರಿಸಿ ಸೇವಿಸಿ
ನವರಾತ್ರಿಯಲ್ಲಿ ಮಲಬದ್ಧತೆ ಅಥವಾ ಇತರ ಹೊಟ್ಟೆಯ ಸಮಸ್ಯೆ ತಪ್ಪಿಸಲು ನಿಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಿ. ಇದು ಹೊಟ್ಟೆ ಸ್ವಚ್ಛಗೊಳಿಸುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ ಮತ್ತು ಆರೋಗ್ಯ ಹೆಚ್ಚಿಸುತ್ತದೆ.
ಚಹಾ ಅಥವಾ ಕಾಫಿ ಸೇವನೆ ತಪ್ಪಿಸಿ
ಈ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ತಪ್ಪಿಸಲು ಉತ್ತಮ ಮಾರ್ಗವೆಂದರೆ ಹಣ್ಣು ಮತ್ತು ತರಕಾರಿಗಳ ಸೇವನೆಯ ನಡುವೆ ಸರಿಯಾದ ಸಮಯದ ಅಂತರ ಕಾಯ್ದುಕೊಳ್ಳಿ. ನಿದ್ರೆ ಅಥವಾ ಆಲಸ್ಯವನ್ನು ದೂರವಿರಿಸಲು ನೀವು ಅತಿಯಾದ ಚಹಾ ಮತ್ತು ಕಾಫಿ ಸೇವನೆ ತಪ್ಪಿಸಿ.
ಈ ವಿಷಯ ನೆನಪಿನಲ್ಲಿಡಿ
ಖರ್ಜೂರ ಅಥವಾ ಸಂಪೂರ್ಣ ಹಣ್ಣು ಸೇವನೆ ಜೊತೆ ಉಪವಾಸ ಮುರಿಯಿರಿ. ರಾತ್ರಿಯ ಊಟಕ್ಕೆ ಸಾಬುದಾನ ಅಥವಾ ಪೋಹಾ ಸೇವಿಸಿ. ಎಣ್ಣೆಯುಕ್ತ ಆಹಾರ ಅತಿಯಾದ ಸೇವನೆ ಮಜ್ಜಿಗೆ, ಮೊಸರು, ರಾಯತ ಇತ್ಯಾದಿ ಸೇವಿಸಿ.