ಚಂಡೀಗಢ : ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬಿಜೆಪಿ ಗೆಲುವಿನ ಬೆನ್ನಲ್ಲೇ ನಯಾಬ್ ಸಿಂಗ್ ಸೈನಿ ಅವರು ಹರಿಯಾಣದ ಮುಂದಿನ ಸಿಎಂ ಆಗುತ್ತಾರೆ ಎಂಬುದು ಬಹುತೇಕ ಅಂತಿಮವಾಗಿದ್ದು, ಅಕ್ಟೋಬರ್ 12ರಂದು ಪ್ರಮಾಣವಷನ ಸ್ವೀಕರಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಧೋಲಿ ಮತ್ತು ನಾಯಬ್ ಸೈನಿ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಮೂಲಗಳ ಪ್ರಕಾರ ಅಕ್ಟೋಬರ್ 12 ವಿಜಯದಶಮಿಯಂದು ನಾಯಬ್ ಸೈನಿ ಅವರು ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಮುಂದಿನ ಸರ್ಕಾರ ರಚನೆಯತ್ತ ಜನರ ಕಣ್ಣು ನೆಟ್ಟಿದೆ. ನಾಯಬ್ ಸೈನಿ ಅವರು ಸಿಎಂ ಆಗುವುದರೊಂದಿಗೆ ಒಬ್ಬ ಅಥವಾ ಇಬ್ಬರು ಡಿಸಿಎಂ ಆಗಬಹುದು ಎನ್ನಲಾಗಿದೆ.