‘ಬ್ರಾಹ್ಮಣರು ಭಾರತದ ಹೊಸ ಯಹೂದಿಗಳು’ ಎಂದು ಪ್ರತಿಪಾದಿಸಿದ್ದ ಅನುರಾಧ ತಿವಾರಿ: ಕಾರಿನ ಮೇಲೆ ‘#BrahminGenes’ ಸ್ಟಿಕ್ಕರ್‌ ಪ್ರದರ್ಶನ

ಬ್ರಸ್ಟ್ ಔಟ್ ಸಂಸ್ಥೆಯ ಸಿಇಓ ಅನುರಾಧಾ ತಿವಾರಿ ಅವರ “#BrahminGenes” ಕಾರ್ ಸ್ಟಿಕ್ಕರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ. ಈ ಕುರಿತು ಇಂಡಿಯಾ ಟೈಮ್ಸ್  ವಿಸ್ತೃತ ವರದಿ ಪ್ರಕಟಿಸಿದೆ.

ಭಾರತೀಯ ಸಮಾಜದಲ್ಲಿ ಜಾತಿ ಗುರುತು ಮತ್ತು ತಾರತಮ್ಯದ ಹಳೆಯ-ಹಳೆಯ ಸಮಸ್ಯೆಯನ್ನು ಈ ಫೋಟೋ ಎತ್ತಿ ತೋರಿಸಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವಿಮರ್ಶಕರು ಅವಳನ್ನು ‘ಜಾತಿ ಪಾರಮ್ಯವನ್ನು’ ಪ್ರಚಾರ ಮಾಡಿದ್ದಕ್ಕಾಗಿ ಖಂಡಿಸಿದ್ದಾರೆ. ಅಂತಹ ಪ್ರದರ್ಶನಗಳು ಕೇವಲ ಜಾತಿಯ ಆಧಾರದ ಮೇಲೆ “ಶ್ರೇಷ್ಠತೆ” ಹಳೆಯ ಕಲ್ಪನೆಗಳನ್ನು ಶಾಶ್ವತಗೊಳಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.

“ನನ್ನ ಕಾರಿಗೆ #BrahminGenes ಎಂದು ಸ್ಟ್ಯಾಂಪ್ ಮಾಡಲಾಗಿದೆ” ‘ಹೆಮ್ಮೆಯ ಬ್ರಾಹ್ಮಣ’ ಎಂದು ಅನುರಾಧಾ ತಿವಾರಿ ಹೇಳಿದ್ದಾರೆ. ಅದರೊಂದಿಗೆ ಆಕೆಯ X ಖಾತೆಯಲ್ಲಿ ಮೀಸಲಾತಿ ವಿರೋಧಿಸುವ ಪೋಸ್ಟ್ ಗಳು ಕಂಡು ಬಂದಿದೆ.

Advertisement

“ಬುದ್ಧಿವಂತಿಕೆಯಿಂದ ಜನಿಸಿದ್ದು, ಬಲದಿಂದ ಬೆಳೆದಿರುವುದು. ಹಿಂದೂ ಧರ್ಮದ ಜ್ಯೋತಿಯನ್ನು ಹೊತ್ತವರು. ಬ್ರಾಹ್ಮಣನಾಗಿರುವುದಕ್ಕೆ ಹೆಮ್ಮೆ!” ಎಂಬ ಪೋಸ್ಟನ್ನು x ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಆಕೆಯ ಮೊದಲ ಪೋಸ್ಟ್ ಅಲ್ಲ. ಆಗಸ್ಟ್‌ನಲ್ಲಿ ಆಕೆ “ಬ್ರಾಹ್ಮಣರು ಭಾರತದ ಹೊಸ ಯಹೂದಿಗಳು” ಎಂದು ಘೋಷಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಳು. ಅವರು ಇದೇ ರೀತಿಯ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ವಾದಿಸಿ “ಯಹೂದಿಗಳನ್ನು ಗುರಿಯಾಗಿಸಿದಂತೆಯೇ, ಅದೇ ತಂತ್ರಗಳನ್ನು ಈಗ ಬಳಸುತ್ತಿದೆ.” ಎಂದು ಉಲ್ಲೇಖಿಸಿದ್ದಳು.

ಅವರ ಪೋಸ್ಟ್ ನ್ನು ಕೆಲವರು ಬೆಂಬಲಿಸಿಯೂ ಕಮೆಂಟ್ ಮಾಡಿದರೆ ಬಹುತೇಕ ಮಂದಿ ಅವರ ಜಾತಿ ಪಾರಮತ್ಯವನ್ನು ಖಂಡಿಸಿದ್ದಾರೆ.

“ವಿಪರ್ಯಾಸವೆಂದರೆ, ಆಕೆ ತನ್ನನ್ನು #BrahminGenes ಜೊತೆ ಹಿಂದೂ ಧರ್ಮದ ಜ್ಯೋತಿ ಹೊತ್ತವಳಂತೆ ತೋರಿಸಿಕೊಳ್ಳುತ್ತಿದ್ದಾಳೆ. ಹಿಂದೂ ಧರ್ಮದ ಜ್ಯೋತಿ ಹೊತ್ತವರು ಜಾತಿ ಮೇಲುಗೈ ತೋರಿಸುವುದಿಲ್ಲ. ಅವರು ಇಡೀ ಹಿಂದೂ ಸಮಾಜದ ಬಗ್ಗೆ ಮಾತನಾಡುತ್ತಾರೆ ಎಂದು ಒರ್ವ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ಹೀಗೆ ಬರೆದಿದ್ದು, “ಇವರು ಇದೇ ಜನರು ಇನ್ನು ಮುಂದೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ, ಮೀಸಲಾತಿ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಇರಬೇಕು” ಎಂದು ಅಳುತ್ತಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರ ಹತಾಶೆಯನ್ನು ವ್ಯಕ್ತಪಡಿಸುತ್ತಾ, “ಈ ಆಳವಾದ ಜಾತಿಪದ್ಧತಿಯು ಭಾರತದಲ್ಲಿ ಸಾಯಬೇಕು. ಇಲ್ಲದಿದ್ದರೆ 5 ತಲೆಮಾರುಗಳ ನಂತರವೂ ಈ ರೀತಿಯ ಹುಚ್ಚುತನವು ಮೇಲುಗೈ ಸಾಧಿಸುತ್ತದೆ. ಹಿಂದೂ ಧರ್ಮವು ಇಂದು ಕೇವಲ ಜಾತಿವಾದಕ್ಕೆ ಸಂಬಂಧಿಸಿದೆ ಎಂದಿದ್ದಾರೆ.

ಆಂಕೊಲಾಜಿ ವೈದ್ಯರೊಬ್ಬರು ಪೋಸ್ಟ್ ಬ್ರಾಹ್ಮಣ ಜೀನ್ಸ್ ಎಂಬುವುದು ಇಲ್ಲ ಎಂದು ತಿವಾರಿ ಮಾತಿಗೆ ತಿರುಗೇಟು ನೀಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement